ಬಂಟ್ವಾಳ: ನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಹಿಂದಿರುವ ಮತ್ತೆ ಕೆಲವರ ಮಾಹಿತಿ ಲಭ್ಯವಾಗಿದೆ. ಬಂಧಿತ ಆರೋಪಿಗಳಿಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ನಿರ್ದೇಶನದಲ್ಲಿ ಬಂಟ್ವಾಳ ಇನ್ಸ್ಪೆಕ್ಟರ್ ನಾಗರಾಜ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ತಲವಾರನ್ನು ವಶಪಡಿಸಿಕೊಂಡಿ ದ್ದಾರೆ.
ತಾಲೂಕಿನ ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ಮೆಂಟ್ನಲ್ಲಿ ಅ.20ರಂದು ಸುರೇಂದ್ರ ಬಂಟ್ವಾಳ್ ಹೆಣವಾಗಿ ಮಲಗಿದ್ದ. ಆತನ ಮೊಬೈಲಿಗೆ ಕರೆ ಮಾಡಿದರೆ ತಲುಪುತ್ತಿರಲಿಲ್ಲ. ಅಲ್ಲದೆ ಪರಿಸರದವರು ಸುರೇಂದ್ರನ ಫ್ಲಾಟ್ ನಿಂದ ವಾಸನೆ ಬರುತ್ತಿರುವುದನ್ನು ಪೊಲೀಸರಿಗೆ ತಿಳಿಸಿದ್ದರು.
ಸುರೇಂದ್ರನ ಕೊಲೆಯಾದ ನಂತರ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39 ) ಹಾಗೂ ಮಂಗಳೂರು ನೀರುಮಾರ್ಗ ಬೋಂಡಂತಿಲ ನಿವಾಸಿ ಗಿರೀಶ್ (28) ಎಂಬುವರು ಬಂಧಿಸಲಾಗಿದೆ.
ಪೊಲೀಸರು ಇನ್ನೂ ಹಲವರ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹೆಚ್ಚಿನ ತನಿಖೆಯ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳಿಗೆ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಸದ್ಯ ಆರೋಪಿಗಳಿಬ್ಬರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಗಳ ಪತ್ತೆಗೆ ಪಿಎಸ್ಐ ಗಳಾದ ಅವಿನಾಶ್, ಪ್ರಸನ್ನ, ನಂದಕುಮಾರ್, ವಿನೋದ್, ರಾಜೇಶ್, ಕಲೈಮಾರ್, ಪಿಐ ರವಿ ಮತ್ತು ಡಿಸಿಐಬಿ ಸಿಬ್ಬಂದಿಯನ್ನು ಒಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿತ್ತು.
ಈ ಮಧ್ಯೆ ಸುರೇಂದ್ರ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಬಂಟ್ವಾಳ ತಾಲೂಕು ಭಂಡಾರಿ ಸಮಾಜ ಒತ್ತಾಯಿಸಿದೆ.
Click this button or press Ctrl+G to toggle between Kannada and English