ಮಂಗಳೂರು : ನಾನು ನ್ಯಾಯಾಧೀಶಳಾಗಿ ಕಾನೂನನ್ನು ಪ್ರತಿನಿಧಿಸುತ್ತೇನೆ. ಕಡಿಮೆ ಮಾತನಾಡಿದಷ್ಟು ಹೆಚ್ಚು ಗೌರವ ಎಂದುಕೊಂಡಿದ್ದೇನೆ. ಆದರೆ ಭಾಷೆ ಮತ್ತು ಕಾನೂನಿನ ವಿಚಾರ ಬಂದಾಗ ನಾನು ಮಾತನಾಡಲೇ ಬೇಕಿದೆ. ಭಾಷೆ ಎಂಬುದು ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿದೆ. ಮಗುವಿನ ತೊದಲು ನುಡಿಯಿಂದ ತಾಯಿ ಸಂಗೀತವನ್ನು ಆಲಿಸುತ್ತಾಳೆ. ಆ ಸಂಗೀತದಿಂದ ತನ್ನ ನೋವನ್ನು ಮರೆಯುತ್ತಾಳೆ. ಭಾಷೆ ಎಂಬುದು ಒಂದು ಒಲವಿನ ಸಂಸ್ಕೃತಿ ಇದ್ದಂತೆ ಎಂದು ಹಿರಿಯ ನ್ಯಾಯಾಧೀಶೆ/ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಜಿ. ಶಿಲ್ಪಾ ಹೇಳಿದರು. ಅವರು ಇಂದು (01-11-2020) ಬೆಳಿಗ್ಗೆ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನವು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಮನ:ಶಾಂತಿಗಾಗಿ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಎದುರಿಸುತ್ತಿರುವ ಕೊರೊನಾ ಭೀತಿಯ ಈ ಪರಿಸ್ಥಿತಿಯ ನಡುವೆ ಮನ:ಶಾಂತಿ ತುಂಬುವಂತಹ ಈ ಕಾರ್ಯಕ್ರಮ ನಿಜಕ್ಕೂ ಒಂದು ಅರ್ಥಪೂರ್ಣ ಕಾರ್ಯಕ್ರಮ. ಭಾಷೆ ಎಂದರೆ ಒಂದು ವಿಜ್ಞಾನ ಇದ್ದಂತೆ ಎಂದ ಅವರು ಮನ:ಶಾಂತಿಗಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಕಾನೂನಿನ ರಕ್ಷಣೆ ಯಾವತ್ತೂ ಇದ್ದೇ ಇರುತ್ತದೆ ಎಂದು ಹೇಳಿದರು.
NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ ದೇಶ ಎದುರಿಸುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲಿ ಮನ:ಶಾಂತಿಯನ್ನು ಹುಡುಕುವ ಪರಿಸ್ಥಿತಿ ಉಂಟಾಗಿರುವುದು ಬಹುದೊಡ್ಡ ದರಂತ. ಈ ನಿಟ್ಟಿನಲ್ಲಿ ಮನ:ಶಾಂತಿಗಾಗಿ ಕನ್ನಡ ಗೀತಗಾಯನ ಕಾರ್ಯಕ್ರಮ ಔಚಿತ್ಯಪೂರ್ಣ ಎಂದು ಹೇಳಿದರು.
ಬಳಿಕ ನಿರಂತರ 6 ಗಂಟೆಗಳ ಕಾಲ ಕನ್ನಡದ ಜನಪ್ರಿಯ ಮಾಧುರ್ಯ ಪ್ರಧಾನ ಗೀತೆಗಳಿಗೆ ಗಾಯಕರು ಧ್ವನಿಯಾದರು.
KSSAP ಅಧ್ಯಕ್ಷೆ ರಾಣಿ ಪುಪ್ಪಲತಾ ದೇವಿ ಸ್ವಾಗತಿಸಿದರು. ಮಲ್ಲಿಕಾ ಶೆಟ್ಟಿ ನಿರೂಪಿಸಿದರು.
ಯೌಟ್ಯೂಬ್ ವಿಡಿಯೋ
— Mega Media News (@megamedianews10) November 1, 2020
https://www.facebook.com/100002438323661/videos/3431941140230463/
Click this button or press Ctrl+G to toggle between Kannada and English