ತುಳು ಅಕಾಡೆಮಿಯಲ್ಲಿ ಸ್ಥಾನ ಮಾನ ನೀಡದಿದ್ದರೆ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು : ಕತ್ತಲ್ ಸಾರ್

8:36 PM, Monday, November 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kattalsarಮಂಗಳೂರು: ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ನನ್ನ ಆಡಿಯೋ ಮಾಡಿಕೊಂಡು  ವಯ್ಯಕ್ತಿಕ ಹಗೆ ಸಾಧಿಸಿದ್ದಾರೆ ಎಂದು  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.

ಜಿ.ವಿ.ಎಸ್.ಉಳ್ಳಾಲ್ ಮತ್ತು ಅವರ ಪತ್ನಿ ವಿದ್ಯಾಶ್ರೀ ಉಲ್ಲಾಳ್ ತುಳು ಅಕಾಡೆಮಿಯಲ್ಲಿ ಅಧಿಕೃತ ಸ್ಥಾನ ಮಾನಕ್ಕಾಗಿ ಬೇಡಿಕೆ ಇಟ್ಟಿದ್ದರು ಅದು ಸಾಧ್ಯವಿಲ್ಲಾ ಎಂದಿದ್ದಕ್ಕೆ ನಿಮ್ಮ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ  ಹಾಕಿದ್ದರು ಎಂದು  ಕತ್ತಲ್ ಸಾರ್ ಹೇಳಿದ್ದಾರೆ.

ವಿದ್ಯಾಶ್ರೀ ಉಲ್ಲಾಳ್ ಕಾಂಗೆಸ್ಸ್ ಪಕ್ಷದವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ತುಳು ಅಕಾಡೆಮಿಯಲ್ಲಿ ಸದಸ್ಯರಾಗಿದ್ದರು.  ಜಿ.ವಿ.ಎಸ್.ಉಳ್ಳಾಲ್  ನನ್ನನ್ನು ಶ್ವಾನ ವನ್ನು ಗದ್ದುಗೆಗೆ ಏರಿಸಿದಂತೆ ಎಂದು ಹೋಲಿಸಿದ್ದರು ಅದಕ್ಕೆ ನಾನು ಶ್ವಾನ ಕತ್ತೆಗೆ ಗಿಂತ ಮಿಗಿಲಲ್ಲ ಎಂದಿದ್ದೆ, ಅವರು ಅವಾಚ್ಯ ಶಬ್ದಗಳಿಂದ ಬೈದ ಅಡಿಯೊಗಳು ನನ್ನ ಬಳಿ ಇದೆ ಎಂದು ಕತ್ತಲ್ ಸಾರ್ ಹೇಳಿದ್ದಾರೆ.

ಆ ಆಡಿಯೋದಲ್ಲಿ ಮಾತನಾಡಿರುವುದು ತಾನೇ, ಆದರೆ ನನ್ನ ಮಾತನ್ನು ತಿರುಚಲಾಗಿದೆ. ‘ನಮ್ಮ ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ಅವರಲ್ಲಿ ತಾನು ಮಾಮೂಲಿಯಾಗಿ ಮಾತನಾಡಿದ್ದು. ಆದರೆ, ನನ್ನ ಮಾತನ್ನು ಉದ್ದೇಶಪೂರ್ವಕವಾಗಿ ತಿರುಚಿ ವೈರಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ನಾನೊಬ್ಬ ಪರಿಶಿಷ್ಟ ಪಂಗಡದಿಂದ ಬಂದವ ಎಂದು ಅವರಿಗೆ ಕೀಳರಿಮೆ ಇದೆ. ನನ್ನ ಹೋರಾಟ ಒಂದೇ ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವುದು ಮತ್ತು ತುಳುವಿಗಾಗಿ ಕೆಲಸ ಮಾಡುವವರಿಗಾಗಿ ಬೆಂಬಲ ನೀಡುವುದು ಎಂದಿದ್ದಾರೆ.

ಅದಲ್ಲದೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ 1500 ಜನರಿಗೆ ಕಿಟ್ ಹಂಚಿದ್ದೇವೆ, ಕಷ್ಟದಲ್ಲಿರುವ ಕಲಾವಿದರಿಗೆ ಹಣದ ಸಹಾಯವನ್ನು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಏನಿದು ಆಡಿಯೋ 

ಪ್ರತ್ಯೇಕ ತುಳು ರಾಜ್ಯಕ್ಕಾಗಿ ದೊಡ್ಡ ಮಟ್ಟದ ಹೋರಾಟದ ಕಿಚ್ಚು ಹಚ್ಚಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರೇ ಪ್ರತ್ಯೇಕ ರಾಜ್ಯಕ್ಕಾಗಿ ಪ್ರಚೋದನೆಯ ಮಾತುಗಳನ್ನು ಆಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ತುಳು ರಾಜ್ಯಕ್ಕಾಗಿ ಗಲಭೆ ಮಾಡಬೇಕು, ಎಲ್ಲೆಡೆ ಹೋರಾಟ ಆಗಬೇಕು. ದೊಡ್ಡ‌ ಮಟ್ಟದಲ್ಲಿ ಬ್ಲಾಸ್ಟ್ ಮಾಡಿ, ಟೈರ್ಗಳಿಗೆ ಬೆಂಕಿ ಹಚ್ಚಬೇಕು. ಕೆಂದ್ರ ಸಚಿವ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜಕೀಯ ನಾಯಕರಿಗೆ ಬೈಯ್ಯಬೇಕು ಎಂದು ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ ಎನ್ನಲಾಗಿದೆ.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲೂ ತುಳು ರಾಜ್ಯಕ್ಕಾಗಿ ಹೋರಾಟ ಆಗಬೇಕು. ಆಗ ನಮ್ಮನ್ನು ಸಂಧಾನಕ್ಕೆ ಕರೆದು ಸರ್ಕಾರದವರು ಮಾತನಾಡುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ ಎಂದು ಹೇಳಬೇಕು. ತುಳು ರಾಜ್ಯ ಘೋಷಣೆ ಮಾಡಿದರಷ್ಟೇ ಸಮಾಧಾನ ಆಗ್ತಾರೆ ಎಂದು ಹೇಳಬೇಕು ಎಂಬ ಪ್ರಚೋದನಾತ್ಮಕ ಮಾತುಗಳನ್ನು ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಮೇ.29 ರಂದು ‘ನಮ್ಮ ತುಳುನಾಡು ಟ್ರಸ್ಟ್’ ಪದಾಧಿಕಾರಿಗಳ ಜೊತೆ ಕತ್ತಲ್ ಸಾರ್ ಈ ರೀತಿಯಲ್ಲಿ ತುಳುವಿನಲ್ಲಿ ಮಾತನಾಡಿದ್ದು, ಸ್ವತಃ ‘ನಮ್ಮ ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ಆಡಿಯೋ ವೈರಲ್ ಮಾಡಿದ್ದಾರೆ. ಒಂದು ವೇಳೆ ಗಲಭೆ ನಡೆದಲ್ಲಿ‌ ‘ನಮ್ಮ ತುಳುನಾಡು ಟ್ರಸ್ಟ್’ ಮೇಲೆ ಆರೋಪ ಬರುತ್ತದೆಂದು ಆಡಿಯೋ ವೈರಲ್ ಮಾಡಿರುವೆ ಎಂದು ಜಿ.ವಿ.ಎಸ್.ಉಳ್ಳಾಲ್ ಹೇಳಿದ್ದಾರೆ‌.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English