ಸುರೇಂದ್ರ ಬಂಟ್ವಾಳ್‌ ಹತ್ಯೆಗೆ ಸಹಕರಿಸಿದ ಇಬ್ಬರ ಬಂಧನ

6:25 PM, Tuesday, November 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

PratheekKotian Jayeshಬಂಟ್ವಾಳ :  ರೌಡಿ ಶೀಟರ್ ಮತ್ತು ನಟ ಸುರೇಂದ್ರ ಬಂಟ್ವಾಳ್‌ ಹತ್ಯೆಗೆ ಸಹಕಾರ ನೀಡಿದ ಆರೋಪಿಗಳಾದ ಪ್ರತೀಕ್ ಕೋಟ್ಯಾನ್  ಬೆಳ್ತಂಗಡಿ  ಮತ್ತು ಜಯೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ.

ಮಂಗಳವಾರ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಲಯ ಬಂಧನ ವಿಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಈಗಾಗಲೇ ಆರೋಪಿಗಳಾದ ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವವ್ ಶರಣ್, ವೆಂಕಟೇಶ್ ಪೂಜಾರಿ, ಪ್ರದೀಪ್, ಶರೀಫ್, ದಿವರಾಜ್, ರಾಜೇಶ್ ಮತ್ತು ಅನಿಲ್ ಪಂಪ್‌ವೆಲ್‌ನನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಂಡಾರಿಬೆಟ್ಟುವಿನ ವಸ್ತಿ ಅರ್ಪಾಟ್‌ಮೆಂಟ್‌ನಲ್ಲಿ ಸುರೇಂದ್ರ ಬಂಟ್ವಾಳ್ ಹತ್ಯೆ ನಡೆದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English