ಮಂಗಳೂರು : ನ. 5ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಮಹತ್ವದ ಸಭೆಗೆ ಮಂಗಳೂರು ಸರ್ವ ರೀತಿಯಿಂದ ಸಿದ್ಧಗೊಂಡಿದೆ. ನಗರದೆಲ್ಲೆಡೆ ಬಿಜೆಪಿ ಬಂಟಿಂಗ್ಸ್ ಹಾಗೂ ಧ್ವಜಗಳನ್ನು ಮತ್ತು ಬಣ್ಣದ ಬೆಳಕುಗಳನ್ನು ಅಳವಡಿಸಲಾಗಿವೆ.
ನಗರದ ಎಂ.ಜಿ. ರಸ್ತೆಯ ವ್ಯಾಪ್ತಿಯಲ್ಲಿ ಬಿಜೆಪಿ ಬಂಟಿಂಗ್ಸ್, ವಿವಿಧ ಮುಖ್ಯ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳನ್ನು ಅಳವಡಿಸಲಾಗಿವೆ. ಸಭೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ಬಿಜೆಪಿಯ ಅಗ್ರಗಣ್ಯ ನಾಯಕರ ಭಾವಚಿತ್ರಗಳ ಬ್ಯಾನರ್‌ಗಳನ್ನು ಅಳವಡಿಸಲಾಗಿವೆ. ನಗರದ ವಿವಿಧ ವೃತ್ತಗಳನ್ನು ಅಲಂಕರಿಸಲಾಗಿವೆ.
ನ. 5ರಂದು ಬೆಳಗ್ಗೆ 10 ಗಂಟೆಯಿಂದ ಸಭೆ ಆರಂಭಗೊಳ್ಳಲಿದ್ದು, ಇಡೀ ದಿನ ಮುಂದುವರಿ ಯಲಿದೆ. ಉದ್ಘಾಟನೆ ನೆರವೇರಿಸುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಭೆ ಯಲ್ಲಿ ಪಾಲ್ಗೊಳ್ಳುವ ಕೆಲವು ಪ್ರಮುಖ ಸಚಿವರು, ನಾಯಕರು ನ. 4ರಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ.
ಸಭೆಯಲ್ಲಿ ಎಲ್ಲ ಕೋರ್ ಕಮಿಟಿ ಸದಸ್ಯರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಕೇಂದ್ರದ ಇಬ್ಬರು ಸಚಿವರು, ಬಿಜೆಪಿ ರಾಜ್ಯ ಪದಾಧಿಕಾರಿಗಳು, ಪ್ರಕೋಷ್ಟ ಗಳ ಸಂಚಾಲಕರು, ಸಹ ಸಂಚಾಲಕರು, ವಿಭಾಗೀಯ ಸಂಘಟನ ಕಾರ್ಯದರ್ಶಿಗಳು, ರಾಜ್ಯ ಕಾರ್ಯಕಾರಿಣಿ ಪದಾಧಿಕಾರಿಗಳು, ವಿವಿಧ ಘಟಕಗಳ ರಾಜ್ಯ ಮುಖ್ಯಸ್ಥರು, ಕೋರ್ ಕಮಿಟಿ ಸದಸ್ಯರು ಸಹಿತ ಸುಮಾರು 120 ಮಂದಿ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಅವರಿಗೆ ನಗರದ ಪ್ರಮುಖ ಹೊಟೇಲ್ ಸಮೂಹವೊಂದಕ್ಕೆ ಸೇರಿದ 2 ಹೊಟೇಲ್‌ಗಳಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
Click this button or press Ctrl+G to toggle between Kannada and English