ಬಂಟ್ವಾಳ : ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಬೆಳಗಿನ ಜಾವ ತನ್ನ ಮನೆಯಲ್ಲಿ ನಿಧನ ಹೊಂದಿದರು.
ಕೊರೊನಾದಿಂದ ಗುಣಮುಖರಾದ ಬಳಿಕ ಕಿಡ್ನಿ ವೈಫಲ್ಯದಿಂದ ಕಳೆದೆರಡು ತಿಂಗಳಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಶುಗರ್ ಸಮಸ್ಯೆಯು ಅವರನ್ನು ಕಾಡಿತ್ತು. ಅವರು ನಿನ್ನೆಯಷ್ಟೇ ಡಿಸ್ಚಾರ್ಜ್ ಆಗಿದ್ದರು.
ಮುಂಗಾರು ಪತ್ರಿಕೆ ಸಹಿತ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ಬಳಿಕ ಸುದೀರ್ಘ ಕಾಲ ಬಂಟ್ವಾಳದಿಂದ ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳ ವರದಿಗಾರರಾಗಿ ಕೆಲಸ ಮಾಡಿದ್ದರು.
ತಾಯಿ, ಪತ್ನಿ, ಸಹೋದರರು, ಸಹೋದರಿ ಸಹಿತ ಸಹಿತ ಅಪಾರ ಬಂಧು, ಮಿತ್ರರನ್ನು ಅವರು ಅಗಲಿದ್ದಾರೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದ ಅವರ ನಿಧನಕ್ಕೆ ಸಂಘ ಸಂತಾಪ ಸೂಚಿಸಿದೆ.
Click this button or press Ctrl+G to toggle between Kannada and English