ಮಠದಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಮೃತ್ಯು

12:50 PM, Monday, November 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Matadakereಮಂಗಳೂರು : ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಮಠದಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ನಿಹಾಲ್ ಶಾ ( 20 ) ಮೃತಪಟ್ಟ ಯುವಕ. ನಿಹಾಲ್ ಶಾ ತನ್ನ ಏಳು ಮಂದಿ ಸ್ನೇಹಿತರೊಡನೆ ಭಾನುವಾರ ಸಾಯಂಕಾಲ ಮಠದಕೆರೆಗೆ ಈಜಲು ಬಂದಿದ್ದ. ಈಜುವಾಗ ಏಕಾಏಕಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಬೆಳುವಾಯಿಯ ಅಂಥೋಣಿ ಎಂಬುವರು ನಿಹಾಲ್ ಶಾ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English