ಟ್ರಂಪ್ ಸೋಲು ಭಾರತ ಕ್ಕೆ ಪಾಠ – ಶಿವಸೇನೆ

2:22 PM, Monday, November 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tackreyಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಶಿವಸೇನೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತವೂ ಪಾಠ ಕಲಿತರೆ ಒಳ್ಳೆಯದು ಎಂದು ಹೇಳಿದೆ.

ಶಿವಸೇನೆ, “ಅಧ್ಯಕ್ಷ ಟ್ರಂಪ್ ಎಂದಿಗೂ ರಾಷ್ಟ್ರದ ಅಧ್ಯಕ್ಷ ಪಟ್ಟಕ್ಕೆ ಅರ್ಹರಲ್ಲ. ಅಮೆರಿಕದ ನಾಗರಿಕರು ತಾವು ನಾಲ್ಕು ವರ್ಷದ ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿದ್ದಾರೆ. ಟ್ರಂಪ್ ಗೆ ಒಂದೂ ಭರವಸೆ ಪೂರೈಸಲಾಗಿಲ್ಲ. ನಾವೂ ಸಹ ಟ್ರಂಪ್ ಸೋಲಿನಿಂದ ಕಲಿತರೆ ಒಳ್ಳೆಯದಾಗಲಿದೆ”  ಎಂದು  ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಹೇಳಿಕೊಂಡಿದೆ .

ಅಮೆರಿಕಾದಲ್ಲಿ ನಿರುದ್ಯೋಗ ಸಾಂಕ್ರಾಮಿಕ ಕೋವಿಡ್ ಗಿಂತ ಹೆಚ್ಚಾಗಿದೆ. ಹಾಗಿದ್ದರೂ ಟ್ರಂಪ್ ಸಮಸ್ಯೆ ಬಗೆಹರಿಸುವುದರ ಬದಲಾಗಿ ಅಸಂಬದ್ಧ ಹೇಳಿಕೆ, ರಾಜಕೀಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಪಕ್ಷ ಹೇಳಿದೆ. “ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರದಲ್ಲಿ ಅಧಿಕಾರವು ಬದಲಾವಣೆ ಹಾದಿಯಲ್ಲಿದೆ.. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸ್ಪಷ್ಟವಾಗಿ ಸೋಲನುಭವಿಸಿದೆ.. ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನು ಹೊರತುಪಡಿಸಿ ಬೇರೆ ಪರ್ಯಾಯಗಳಿಲ್ಲ ಎಂಬ ಭ್ರಮೆಯಿಂದ ಕೂಡಿರ್ಯ್ವ ನಾಯಕರನ್ನು ಮನೆಗೆ ಕಳಿಸುವ ಕೆಲಸವನ್ನು ಜನರು ಮಾಡಬೇಕಾಗಿದೆ” ಎಂದು ಹೇಳಿದೆ.

ಇನ್ನು ಟ್ರಂಪ್ ತಮ್ಮ ಸೋಲು ಒಪ್ಪಿಕೊಳ್ಳಲು ತಯಾರಿಲ್ಲ. ಅವರು ಮತದಾನದ ಹಗರಣದ ಬಗ್ಗೆ “ಹಾಸ್ಯಾಸ್ಪದ” ಆರೋಪಗಳನ್ನು ಮಾಡಿದ್ದಾರೆ. “ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು. ತಪ್ಪಾದ ವ್ಯಕ್ತಿಯೊಂದಿಗೆ ನಿಲ್ಲುವುದು ನಮ್ಮ ಸಂಸ್ಕೃತಿಯಲ್ಲ ಆದರೆ ಅದನ್ನು ಇನ್ನೂ ಮುಂದುವರಿಸಲಾಗುತ್ತಿದೆ. ಬೈಡನ್ ಅಮೆರಿಕದ ಮುಖ್ಯಸ್ಥರಾಗುವುದು ಖಚಿತ” ಶಿವಸೇನೆ ಅಭಿಪ್ರಾಯಪಟ್ಟಿದೆ.

“ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಟ್ರಂಪ್ ಮಹಿಳೆಯನ್ನು ಗೌರವಿಸಲಿಲ್ಲ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸುವವರು ಇದರಿಂದ ಕಲಿಯಬೇಕು” ಎಂದು ಹೇಳಿದೆ.

ಭಾರತವು ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಸಿದ್ದರೂ ಅಮೆರಿಕದ ಸಂವೇದನಾಶೀಲ ಜನರು ಟ್ರಂಪ್‌ಗೆ ‘ಬೈ-ಬೈ’ ಹೇಳುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಶಿವಸೇನೆ ಹೇಳಿದೆ. “ಅದೇ ರೀತಿ, ಪ್ರಧಾನಿ ಮೋದಿ, ನಿತೀಶ್ ಕುಮಾರ್ ಸೇರಿದಂತೆ ನಾಯಕರು ಯುವ ತೇಜಶ್ವಿ ಯಾದವ್ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English