ಗಾಂಧೀಜಿ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು: ಸಚಿವ ಕೆ.ಎಸ್.ಈಶ್ವರಪ್ಪ

9:51 PM, Wednesday, November 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

eswarappa gadagಗದಗ: ಗ್ರಾಮಗಳ ಅಭಿವೃದ್ಧಿ ಹಾಗೂ ಗಾಂಧಿಜಿಯವರ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕೆಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಗಾಂಧೀಜಿಯರವರು ಗದಗ ಜಿಲ್ಲೆಗೆ ಭೇಟಿ ನೀಡಿದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಗದಗನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ವಿವಿ ನೂತನ ಆವರಣದಲ್ಲಿ ಬುಧವಾರ ಆಯೋಜಿಸಲಾದ ಸಬರಮತಿ ಆಶ್ರಮದ ಪ್ರತಿಕೃತಿ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಸಚಿವರು ಮಾತನಾಡಿದರು.

ಗದಗ ಜಿಲ್ಲೆಗೆ ಗಾಂಧೀಜಿ ಬಂದು ಇಂದಿಗೆ ಶತಮಾನ ಸಂದಿರುವ ನೆನಪಿಗಾಗಿ ನಿರ್ಮಿಸಿರುವ ಸಬರಮತಿ ಆಶ್ರಮದ ಪ್ರತಿಕೃತಿ ಕಟ್ಟಡ ಲೋಕಾರ್ಪಣೆಗೊಳಿಸುವ ಈ ಸಮಾರಂಭ ಪವಿತ್ರ ಸಮಾರಂಭವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಈ ಆಶ್ರಮದಲ್ಲಿ ಉನ್ನತ ಮಟ್ಟದ ಸಭೆ ಸಮಾರಂಭಗಳು ಮನಪರಿವರ್ತನೆಗಾಗಿ ವಿಧ್ಯಾರ್ಥಿಗಳಿಗೆ ಪ್ರಾರ್ಥನಾ ಮಂದಿರವಾಗಿ ವಿವಿಧ ಉತ್ತಮ ಕಾರ್ಯಚಟುವಟಿಕೆಗಳಿಗೆ ಇದು ಬಳಕೆಯಾಗಲಿ ಎಂದರು.

ಗಾಂಧೀಜಿ ಅವರು ರಾಷ್ಟ್ರ ನಿರ್ಮಾಣದ ಬಗ್ಗೆ ಅಗಾಧ ಕನಸುಗಳನ್ನು ಹೊಂದಿದ್ದರು ಅಲ್ಲದೇ ಎಲ್ಲ ಸಮಾಜದವರು ಸಹ ಸಮಾನವಾಗಿ ಇರಬೇಕೆನ್ನುವದು ಅವರ ಆಶಯವಾಗಿತ್ತು. ಗಾಂಧೀಜಿ ಅಂದರೆ ವಿಶ್ವಕ್ಕೊಬ್ಬ ಆದರ್ಶ ವ್ಯಕ್ತಿ ಎಂದು ಚಿರಪರಿಚತ ಅವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಪ್ರತಿಯೊಬ್ಬರು ಪರಿಶುದ್ಧರಾಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಅನುಷ್ಠಾನಗೊಳಿಸುವಂತೆ ತಿಳಿಸಿದರು. ಈ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ದಾರಿ ದೀಪವಾಗಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯದ ಸಹಕಾರ ದೊರಕಿಸಲು ಪ್ರಯತ್ನಿಸಲಾಗುವದು. ವಿಶ್ವವಿದ್ಯಾಲಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲು ಯೋಜನೆಗಳ ರೂಪ ರೇಷೆಗಳನ್ನು ಸಿದ್ದಪಡಿಸಿ ಗಾಂಧೀಜಿ ಕನಸುಗಳನ್ನು ನನಸಾಗಿಸಲು ಪ್ರತಿಯೊಬ್ಬರು ಪ್ರಯತ್ನಿಸೋಣ ಎಂದು ಸಚಿವ ಈಶ್ವರಪ್ಪ ನುಡಿದರು.

ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ‘ಗದಗ ಜಿಲ್ಲೆಯಲ್ಲಿ ಗಾಂಧೀಜಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ವಿಶ್ವವಿದ್ಯಾಲಯದ ಉದ್ದೇಶ ಸಾಕಾರಗೊಳಿಸಲು ಹಾಗೂ ಇದರ ಅಭಿವೃದ್ಧಿಗಾಗಿ ಸರಕಾರದಿಂದ ಅಗತ್ಯದ ಸಹಕಾರ ನೀಡಲಾಗುವದು ಎಂದರು.

ಹಾವೇರಿ-ಗದಗ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರು ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಆಯಾಮಗಳು ಸಂಪುಟ-೨ ರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಗಾಂಧೀಜಿ ಅವರ ಸಂದೇಶದಂತೆ ಶಕ್ತಿಯು ಭೌದ್ಧಿಕ ಸಾಮರ್ಥ್ಯದಿಂದ ಬರುವದಿಲ್ಲ ಅದು ಅದಮ್ಯ ಇಚ್ಛಾ ಶಕ್ತಿಯಿಂದ ಬರುತ್ತದೆ ಎಂಬಂತೆ ಇಂದಿನ ಈ ಕಟ್ಟಡ ಲೋಕಾರ್ಪಣೆಯೆ ಪ್ರೇರಕ ಶಕ್ತಿಯಾಗಿ ಗಾಂಧೀಜಿ ಕನಸುಗಳನ್ನು ನನಸಾಗಿಸಲು ಶಿಕ್ಷಣ ಒದಗಿಸುವಂತೆ ತಿಳಿಸಿದರು.

ಗದಗ ಶಾಸಕ ಎಚ್.ಕೆ.ಪಾಟೀ ಅವರು ವಿವಿ ಆವರಣದಲ್ಲಿ ನಿರ್ಮಿಸಲಾದ ಭೋಜನ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಸ್ಥೆಯಾಗಿಸಲು ಎಲ್ಲರ ಇಚ್ಛಾಶಕ್ತಿ ಅಗತ್ಯ. ವಿಶ್ವವಿದ್ಯಾಲಯವು ಸಂಶೋಧನೆಗಳ ಮೂಲಕ ಗ್ರಾಮಗಳ ಪುನರ ರಚನೆ ಮಾಡುವಂತಹ ಕಾರ್ಯಕ್ಕೆ ಮುಂದಾಗಬೇಕು. ಗ್ರಾಮಗಳನ್ನು ತೊರೆದು ವಲಸೆ ಹೊದಂತಹ ಜನರನ್ನು ಮರಳಿ ಗ್ರಾಮಕ್ಕೆ ಬರುವಂತೆ ಅಲ್ಲಿಯ ವಾತಾವರಣವನ್ನು ಮರು ಸೃಷ್ಠಿಯಾಗುವಂತಹ ಶಿಕ್ಷಣ ನೀಡುವದು ಈ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಬೇಕು ಎಂದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ್ ಎಸ್ ಚಟಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿ.ಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉಪಾಧ್ಯಕ್ಷೆ ಮಮ್ತಾಜ್ ನದಾಪ್, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಆರ್‌ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ಜಿ.ಪಂ. ಸಿಇಓ ಡಾ.ಆನಂದ್ ಕೆ, ಕರ್ನಾಟಕ
ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಮಾಜಿ ಕುಲಸಚಿವರಾದ ಪ್ರೊ.ಡಾ.ಸುರೇಶ ವಿ. ನಾಡಗೌಡರ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಬ್ಲ್ಯೂ ಪಿ ಕೃಷ್ಣ, ವಿವಿಯ ಕುಲಸಚಿವ ಬಸವರಾಜ ಲಕ್ಕಣ್ಣವರ, ಹಣಕಾಸು ಅಧಿಕಾರಿ ಪ್ರಶಾಂತ ಜೆ.ಸಿ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English