ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರವಾಸಿಗರಿಗೆ ಹಾಗೂ ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಈ ಕೆಳಗಿನ ಧಾರ್ಮಿಕ ಸ್ಥಳಗಳಿಗೆ ರಾತ್ರಿ ಸಾರಿಗೆಗಳನ್ನು (Point to Point Operation) ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದ್ದು, ಸುಸ್ಸಜ್ಜಿತ ಎ.ಸಿ ಡಿಲೆಕ್ಸ್ ವಾಹನಗಳಲ್ಲಿ ಪ್ರತಿದಿನ ರಾತ್ರಿ ಬೆಂಗಳೂರಿನಿಂದ ಈ ಕೂಡಲೇ ಜಾರಿಯಲ್ಲಿ ಬರುವಂತೆ ಕಾರ್ಯಾಚರಣೆಗೆ ಕ್ರಮಕೈಗೊಳ್ಳಲಾಗಿದೆ.
ಧಾರ್ಮಿಕ ಸ್ಥಳಗಳ ವಿವರ ಏಕಮುಖ ಪ್ರಯಾಣ ದರ ರೂ. ಬೆಂಗಳೂರಿನಿಂದ ಹೊರಡುವ ವೇಳೆ ಯಾತ್ರಾ ಸ್ಥಳಗಳಿಂದ ಹೊರಡುವ ವೇಳೆ
1. ಬೆಂಗಳೂರು – ತಿರುಪತಿ 400.00 ರಾತ್ರಿ 9.00 ಗಂಟೆ ರಾತ್ರಿ 10.00 ಗಂಟೆ
2. ಬೆಂಗಳೂರು – ಕೊಲ್ಲೂರು 500.00 ರಾತ್ರಿ 9.00 ಗಂಟೆ ರಾತ್ರಿ 9.00 ಗಂಟೆ
3. ಬೆಂಗಳೂರು – ಧರ್ಮಸ್ಥಳ 400.00 ರಾತ್ರಿ 10.00 ಗಂಟೆ ರಾತ್ರಿ 10.00 ಗಂಟೆ
4. ಬೆಂಗಳೂರು – ಹಂಪಿ (ಹೊಸಪೇಟೆ) 500.00 ರಾತ್ರಿ 10.00 ಗಂಟೆ ರಾತ್ರಿ 10.00 ಗಂಟೆ
ನಿಗಮವು ಕೋವಿಡ್-19 ಸಂಬಂಧದ ಸುರಕ್ಷಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುತ್ತದೆ. ಪ್ರವಾಸಗಳ ವಾಹನಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಲಾಗುವುದು, ಪ್ರವಾಸಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಪ್ರತಿ ದಿನ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿದೆ ಹಾಗೂ ಪ್ರವಾಸಗಳ ಸಂದರ್ಭದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಸೇವೆಗಳ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಬುಕ್ಕಿಂಗ್ ಕೌಂಟರ್ಗಳಾದ ಯಶವಂತಪುರ ಕೇಂದ್ರ ಕಛೇರಿ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೇಂದ್ರ ಹಾಗೂ ರೆಡ್ಬಸ್ ಪೋರ್ಟಲ್ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ. ಅಲ್ಲದೆ, ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ಆನ್ಲೈನ್ ಬುಕ್ಕಿಂಗ್ : www.kstdc.co
ದೂರವಾಣಿ ಸಂಖ್ಯೆ : 080-4334 4334/35,
+91 8970650070/ +91 8970650075
Click this button or press Ctrl+G to toggle between Kannada and English