ಕೊಂಡೆವೂರು ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

4:15 PM, Monday, November 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kondevooruಮಂಗಳೂರು  : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ” ಕಾಮಧೇನು ಗೋಶಾಲೆ “ಯ ಸಮಸ್ತ ಗೋವುಗಳಿಗೆ ಭಾನುವಾರ ಸಂಜೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ತುಲಾಭಾರ’ ಮತ್ತು ‘ಅನ್ನಪ್ರಶಾನ’ ಆಚರಣೆಗಳನ್ನು ನವೆಂಬರ್ 15 ರಿಂದ ಆರಂಭಿಸಲಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ದೇವಸ್ಥಾನ ಮಾರ್ಚ್‌ನಲ್ಲಿ ಮುಚ್ಚಲಾಗಿದ್ದು ಒಂದು ತಿಂಗಳ ಹಿಂದೆ ಮತ್ತೆ ತೆರೆಯಲಾಗಿದೆ. ಆದರೆ ಈ ಎರಡು ಸೇವೆಗಳನ್ನು ಆರಂಭಿಸಿರಲಿಲ್ಲ. ಇದೀಗ ಆರಂಭಿಸಲಾಗಿದೆ.

ಅದೇ ರೀತಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಸೌತಡ್ಕ ಮಹಾಗಣಪತಿ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಅದೇ ರೀತಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು.

ಸುಮಾರು ಆರು ತಿಂಗಳು ಮುಚ್ಚಿದ ಉಡುಪಿ ಶ್ರೀ ಕೃಷ್ಣ ಮಠವು ಸೆಪ್ಟೆಂಬರ್ 28 ರಂದು ಮತ್ತೆ ಬಾಗಿಲು ತೆರೆದಿದ್ದು ಮಠಕ್ಕೆ ನವೆಂಬರ್‌ 15 ರಂದು ಸುಮಾರು 5,000 ಜನರು ಭೇಟಿ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English