ಮಂಗಳೂರು : ಸಿದ್ಧರಾಮಯ್ಯ ಗೆದ್ದಾಗ ಮತಯಂತ್ರ ಸರಿ ಇತ್ತು ಎನ್ನುವ ಕಾಂಗ್ರೆಸ್ ಪಕ್ಷ. ಈಗ ಉಪ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳು ಸೋತಾಗ ಹಾಳಾಗಿದೆ ಎನ್ನುತ್ತಾರೆ. ಇಂತಹ ಮಾತುಗಳು ಭೂಷಣವಲ್ಲ. ಮತಯಂತ್ರ ಕೆಟ್ಟಿಲ್ಲ, ಮನಸ್ಸು ಕೆಟ್ಟಿದೆ” ಯಾವುದೇ ರಾಜಕೀಯ ಪಕ್ಷವಿರಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಎಲ್ಲಾ ಆರೋಗ್ಯ ಇಲಾಖೆಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಕಡೆಗಳಲ್ಲಿ ಏನಾದರೂ ಲೋಪಗಳಾಗಿದ್ದಲ್ಲಿ, ಸಾರ್ವಜನಿಕರಿಂದ ದೂರು ಬಂದಲ್ಲಿ, ಸಮೀಪದ ಆಸ್ಪತ್ರೆಗೆ ಅಗತ್ಯವಿದ್ದಲ್ಲಿ ಅಲ್ಲಿ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಸಣ್ಣ ಪುಟ್ಟ ದೂರುಗಳು ಬರುವುದು ಸಾಮಾನ್ಯ. ಅದನ್ನು ಸರಿ ಪಡಿಸುತ್ತೇವೆ ಎಂದು ಸಚಿವ ಪೂಜಾರಿ ಹೇಳಿದರು.
ಕೊರೊನಾ ಹಾವಳಿಯಿಂದ ಸಪ್ತಪದಿ ಕಾರ್ಯಕ್ರಮ ಸ್ಥಗಿತಗೊಂಡಿದೆ. ಕೊರೊನಾ ನಿಯಮಗಳನ್ನು ಅಳವಡಿಸಿಕೊಂಡು ಮುಹೂರ್ತ ನಿಗದಿ ಪಡಿಸುತ್ತೇವೆ. ಕೋಟೇಶ್ವರದ ಕೊಡಿ ಜಾತ್ರೆ, ಉಪ್ಪುಂದದ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲೆಲ್ಲಿ ಸಾಂಪ್ರದಾಯಿಕವಾದ ಪೂಜೆ, ಪುನಸ್ಕಾರಗಳು ನಡೆಯಬೇಕೋ ಅಲ್ಲೆಲ್ಲಾ ಕೊರೊನಾ ನಿಯಮಾನುಸಾರ ನಡೆಸುವ ಬಗ್ಗೆ ಸೂಚನೆ ನೀಡಲಾಗಿದೆ” ಎಂದರು.
Click this button or press Ctrl+G to toggle between Kannada and English