ಕಾಸರಗೋಡಿನಲ್ಲಿ ಚಾಲನಾ ಲೈಸನ್ಸ್ ಪಡೆಯಲು ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯ

1:09 AM, Friday, November 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

SajithBabu ಕಾಸರಗೋಡು : ವಾಹನ ಚಾಲನಾ ಲೈಸನ್ಸ್ ಪಡೆಯಲು ಅರ್ಜಿ ಜೊತೆ ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ 145 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಾಞಂಗಾಡ್ ಕಿಯಾಸ್ಕ್ ನಲ್ಲಿ ಉಚಿತ ಆಂಟಿಜನ್ ಟೆಸ್ಟ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ಪರಿಸರದ ವರ್ತಕರು, ನೌಕರರು, ಚಾಲಕರು, ಸರಕಾರಿ ನೌಕರರು 14 ದಿನಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕು.

ಜಿಲ್ಲೆಯಲ್ಲಿ 145 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, 137 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ.  ಈಗ 1145 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ.

6326 ಮಂದಿ ನಿಗಾದಲ್ಲಿದ್ದು, ಇದುವರೆಗೆ ಜಿಲ್ಲೆಯಲ್ಲಿ 10816 ಮಂದಿಗೆ ಸೋಂಕು ದೃಢಪಟ್ಟಿದ್ದು,19,453 ಮಂದಿ ಗುಣಮುಖರಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English