ಸುರತ್ಕಲ್: ಪ್ರಯಾಣಿಕನ ಜೀವ ಉಳಿಸಲು ಆಸ್ಪತ್ರೆ ಅಲೆದಾಡಿದ ಬಸ್ ನಿರ್ವಾಹಕ

2:35 PM, Friday, November 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ganeshಮಂಗಳೂರು  : ತನ್ನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಜೀವ ಉಳಿಸಲು ನಿರ್ವಾಹಕನೋರ್ವ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲು ಸ್ವತಹ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.

ಗಣೇಶ್ ಅವರು ಕಳೆದ  ನವಂಬರ್ 16 ರಂದು ಬೆಳಗ್ಗೆ ಎಂದಿನಂತೆ  ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಶಾನ್ ಎಂಬ ಸರ್ವಿಸ್ ಬಸ್ ನಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ದಿನ ಪ್ರಯಾಣಿಸುತ್ತಿದ್ದ ಉತ್ತರಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾನ್ (40) ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು.ತಕ್ಷಣ ಗಣೇಶ್ ಅವರು ಟಿಕೇಟ್ ಕಲೆಕ್ಷನ್ ಕೆಲಸ ಚಾಲಕ ರಮೇಶ್ ಅವರಿಗೆ ವಹಿಸಿ ಈತನನ್ನು ಸುರತ್ಕಲ್ ಖಾಸಗೀ ಆಸ್ಪತ್ರೆಗೆ ಕರೆ ತಂದರು.ಆದರೆ ಆರೋಗ್ಯ ಸ್ಥಿತಿ ಕೈ ಮೀರಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು.ತಕ್ಷಣ ಆಂಬುಲೆನ್ಸ್ ನಲ್ಲಿ ತಾವೇ ವೆಚ್ಚ ಭರಿಸಿ ವೆನ್ ಲಾಕ್ ಗೆ ಕರೆ ತಂದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಚೌಹಾನ್ ಮೃತಪಟ್ಟರು. ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಗಣೇಶ್ ಮಾಹಿತಿ ನೀಡಿ ದೂರು ದಾಖಲಿಸಿದರು.

ಇಂದಿನ ಕಾಲದಲ್ಲಿ ಪೊಲೀಸು, ಕೇಸು ಎಂದು ದೂರ ಸರಿದು ಸುಮ್ಮನಿರುವ ಮಂದಿಯ ನಡುವೆ ಗಣೇಶ್ ಅವರು ಹೊರ ರಾಜ್ಯದ ಕಾರ್ಮಿಕನ ಜೀವ ಉಳಿಸಲು ತನ್ನ ಕೆಲಸವನ್ನು ಬಿಟ್ಟು ದಿನ ಪೂರ್ತಿ ಆತನ ಬಳಿ ಇದ್ದು ಸ್ಪಂದಿಸಿ ಮಾನವೀಯತೆ ಮೆರೆದಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಸುರತ್ಕಲ್ ಪೊಲೀಸ್ ಸಿ ಐ ಚಂದ್ರಪ್ಪ ಹಾಗೂ ಠಾಣೆಯ ಅಧಿಕಾರಿಗಳು, ಸಿಬಂದಿಗಳು ಗಣೇಶ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

SunilKumar   vedavyas   HarishPoonja   SAngara   RajeshNaik   Mattaru   SanjeevaMatanduru

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English