ಮುಂದೆ ಒಂದು ದಿನ ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿ ಭಾರತದ ಭಾಗವಾಗಲಿದೆ : ಫಡ್ನವೀಸ್

9:32 PM, Saturday, November 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Devendra-Fadnavisಮುಂಬೈ: ಮುಂದೆ ಒಂದಲ್ಲ ಒಂದು ದಿನ  ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.

ಮುಂಬೈನಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡುತ್ತಾ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.

ಆಡಳಿತಾರೂಢ ಶಿವಸೇನಾ ಕಾರ್ಯಕರ್ತರೊಬ್ಬರು ಸಿಹಿ ತಿನಿಸಿನ ಅಂಗಡಿಯೊಂದರ ಮಾಲೀಕರಿಗೆ ‘ಕರಾಚಿ’ ಎಂಬ ಪದವನ್ನು ಅಂಗಡಿಯ ಹೆಸರಿನಿಂದ ಕೈಬಿಡುವಂತೆ ಕೋರಿದ್ದರು, ಕಾರಣ ಕರಾಚಿ ಪಾಕಿಸ್ತಾನದ ನಗರಒಂದರ ಹೆಸರಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಮಹಾ ಮಾಜಿ ಸಿಎಂ”ನಾವು” ಅಖಂಡ ಭಾರತ”(ಅವಿಭಜಿತ ಭಾರತ) ದಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂದು ನಾವು ನಂಬುತ್ತೇವೆ” ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು . ಲವ್ ಜಿಹಾದ್ ಎಂಬ ಪದವನ್ನು ಬಿಜೆಪಿ ಸೃಷ್ಟಿ ಮಾಡಿದೆ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆ ಕುರಿತು ಮಾತನಾಡಿ “ಇವರೆಲ್ಲರೂ ಹುಸಿ ಜಾತ್ಯತೀತವಾದಿಗಳು, ಹಿಂದೂಗಳ ಮೇಲೆ ಹಲ್ಲೆ ಮತ್ತು ನಿಂದನೆಯನ್ನು ಅವರು ಜಾತ್ಯಾತೀತತೆ ಎಂದು ಭಾವಿಸಿದ್ದಾರೆ. ” ಎಂದರು

ದೇಶದಲ್ಲಿ ‘ಲವ್ ಜಿಹಾದ್’ ನಡೆಯುತ್ತಿದೆ ಮತ್ತು ಬಿಜೆಪಿ ಅಧಿಕಾರದಲ್ಲಿರದ ಕೇರಳದಲ್ಲೂ ಇದನ್ನುಒಪ್ಪಿಕೊಳ್ಳಲಾಗಿದೆಎಂದು ಅವರು ಹೇಳಿದರು. “ಇಂತಹ ವಿಷಯಗಳು ಬೆಳಕಿಗೆ ಬಂದಾಗ ಕಾನೂನು ರೂಪಿಸುವುದುಸರ್ಕಾರದ ಕೆಲಸ” ಎಂದು ಫಡ್ನವೀಸ್ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English