ಗೋಡೆ ಬರಹ ಬರೆದ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಬೇರೆ ದೇಶಕ್ಕೆ ಬಿಟ್ಟು ಬರಬೇಕು : ಯು.ಟಿ. ಖಾದರ್

11:40 PM, Sunday, November 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

UT Khader ಮಂಗಳೂರು: ಉಗ್ರರಿಗೆ ಬೆಂಬಲವಾಗಿ ಗೋಡೆ ಮೇಲೆ ಬರೆದ ಆರೋಪಿಗಳು  ಯಾರೆ ಇರಲಿ ಅಂತಹ ದೇಶ ದ್ರೋಹಿಗಳನ್ನು 15 ದಿನದೊಳಗೆ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ‌ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಉಗ್ರರ ಪರ ಗೋಡೆ ಬರಹ ಬರೆಯುವವರ ಹಿಂದೆ ಯಾರಿದ್ದಾರೆ ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕಾದದ್ದು ಬಿಜೆಪಿ ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ರೀತಿ ಬರೆದವರು ಯಾರೆ ಇರಲಿ ಅಂತಹ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಅವರನ್ನು ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂತವದಿರಗೆ ನಮ್ಮ ನೆಲದಲ್ಲಿರಲು ಅವಕಾಶ ಕೊಡಬಾರದು ಎಂದರು.

ಪೊಲೀಸ್ ಇಂಟಲಿಜೆನ್ಸ್ ಏನು ಮಾಡ್ತಾ ಇದ್ದಾರೆ,  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಗಳು ಕಾನೂನಿಗೆ ಹೆದರುತ್ತಿಲ್ಲ. ಇಂತಹ ಗೋಡೆ ಬರಹಗಳು ಕಾಂಗ್ರೆಸ್ ಸರ್ಕಾರ ಇರುವಾಗ ಇರಲಿಲ್ಲ. ಬಿಜೆಪಿ ಸರ್ಕಾರ ಇರುವಾಗ ಯಾಕೆ ಆಗುತ್ತಿದೆ. ಬಿಜೆಪಿ ಇರುವಾಗ ಇವರಿಗೆ ಧೈರ್ಯ ಹೇಗೆ ಬರುತ್ತಿದೆ ಎಂದು ಖಾದರ್ ಪ್ರಶ್ನಿಸಿದರು. ಇಂತಹ ದೇಶದ್ರೋಹಿಗಳನ್ನು ಬಂಧಿಸದ ಬಿಜೆಪಿ ಸರ್ಕಾರವನ್ನು ಜನರು ಪ್ರಶ್ನಿಸಬೇಕಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಬರುವ ಬಿಜೆಪಿ ಕಾರ್ಯಕರ್ತರಿಗೆ ಗೋಡೆ ಬರಹ ಬರೆದ ದೇಶದ್ರೋಹಿಗಳನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಬೇಕಾಗಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English