ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ

2:28 PM, Thursday, December 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Workshopಮಂಗಳೂರು :ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ ವನ್ನು ಆಯೋಜಿಸಲಾಗಿತ್ತು. ಇದರ ಅದ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಕೆ.ಎ ದಯಾನಂದ ರವರು ವಹಿಸಿದ್ದರು.

ಆಧಾರ್ ನಡಿ ನೋಂದಣಿಕರಿಸುವುದನ್ನು ಸಮಗ್ರವಾಗಿಸಲು ನಿವೃತ್ತ ಅಧಿಕಾರಿಗಳನ್ನು ಪರಿಶೀಲಕರನ್ನಾಗಿ ನೇಮಿಸಲಾಗಿದ್ದು, ಅವರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯವನ್ನು ಬಹಳ ಗಮನವಹಿಸಿ ನಿರ್ವಹಿಸಬೇಕು. ಪರಿಶೀಲಕರ ಜವಾಬ್ದಾರಿ ಮತ್ತು ಕರ್ತವ್ಯ ಬಹುಮುಖ್ಯವಾಗಿದ್ದು, ಪರಿಶೀಲನೆಯ ನಂತರ ಪರಿಶೀಲಿಸಿದ ಮಾಹಿತಿಯ ದೋಷಗಳಿಗೆ ಪರಿಶೀಲಕರೇ ಜವಾಬ್ದಾರರು. ಹಾಗಾಗಿ ಕಾರ್ಯಾಗಾರವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ಪ್ರಶ್ನೆಗಳಿಗೆ ಉತ್ತರಪಡೆಯುವ ಪ್ರಕ್ರಿಯೆಯು ಇದೇ ಸಂದರ್ಭದಲ್ಲಾಗಬೇಕು, ಪರಿಶೀಲನಾ ಕ್ರಮ, ದಾಖಲಾತಿಗಳ ಪರಿಶೀಲನೆ, ದಾಖಲೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯಿರಿ ಎಂದು ಅವರು ಹೇಳಿದರು

ವೇದಿಕೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್, ಮಂಗಳೂರು ವಿಭಾಗದ ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸತ್ಯಮೂರ್ತಿ, ಇಸಾಕ್ ಅವರು ಕಾರ್ಯಾಗಾರ ನಡೆಸಿಕೊಟ್ಟರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English