ಮಂಗಳೂರು : ಕನ್ನಡ ಪರ ಸಂಘಟನೆಗಳು ನೀಡಿದ ರಾಜ್ಯವ್ಯಾಪ್ತಿ ಬಂದ್ ಕರೆಗೆ ಡಿ.5ರ ಶನಿವಾರದಂದು ದ.ಕ ಜಿಲ್ಲೆ ಯಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ಇತ್ತು,
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಬಂದ್‌ಗೆ ಕರೆ ನೀಡಿದ್ದವು.
ನಗರದಲ್ಲಿ ಮಾತ್ರವಲ್ಲದೇ ಜಿಲ್ಲೆಯಲ್ಲೂ ಕೂಡಾ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ಸೇವೆಗಳು ನಿರಾತಂಕವಾಗಿ ಮುಂದುವರೆದಿದೆ. ಆಟೋ ರಿಕ್ಷಾ, ಕ್ಯಾಬ್‌ಗಳು, ಹೋಟೆಲ್‌ಗಳು ಹಾಗೂ ಇತರ ಅಗತ್ಯ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಸೇವೆ ಎಂದಿನಂತೆ ನಡೆಯುತ್ತಿದ್ದು, ಮಂಗಳೂರು ಡಿಪೋದ 126 ಬಸ್‌ಗಳಲ್ಲಿ ಸುಮಾರು 123 ಬಸ್‌ಗಳು ಬಂದಿವೆ. ಆದರೆ, ಕೊರೊನಾ ಕಾರಣದಿಂದ ಮೂರು ಬಸ್‌ಗಳ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English