ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಲವಾರು ದಾಳಿ

1:09 PM, Wednesday, December 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tajuddinಮಂಗಳೂರು: ಮೂವರು ದುಷ್ಕರ್ಮಿಗಳ ತಂಡ ಯುವಕನೋರ್ವನ‌ ಮೇಲೆ ಅಡ್ಡೂರಿನಲ್ಲಿ ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (30) ತಲವಾರು ದಾಳಿಯಿಂದ‌ ಗಾಯಗೊಂಡವರು ಎಂದು ತಿಳಿದುಬಂದಿದೆ.

ತಾಜುದ್ದೀನ್ ಮಂಗಳವಾರ ತಡರಾತ್ರಿ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದು, ಈ ವೇಳೆ‌ ಮೂವರಿದ್ದ ದುಷ್ಕರ್ಮಿಗಳ ತಂಡ ಯುವಕನ‌ ಮೇಲೆ ತಲವಾರು ಬೀಸಿದ್ದಾರೆ. ಪರಿಣಾಮ ಯುವಕನ ತೊಡೆ ಭಾಗ, ಕೈ ಸಹಿತ ವಿವಿಧೆಡೆ ಗಾಯಗಳಾಗಿವೆ.

ಹಳೆ‌ ವೈಷಮ್ಯದಿಂದಲೇ ದಾಳಿ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಗಾಯಾಳುವನ್ನು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English