ಬಂಟ್ವಾಳ : ಕೈರಂಗಳದ ನಾಟಿ ವೈದ್ಯ ಎಸ್. ಎಸ್ ರಾಮ್ ಇನ್ನಿಲ್ಲ

10:34 PM, Wednesday, December 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ss Ramಬಂಟ್ವಾಳ : ಪ್ರಸಿದ್ಧ ನಾಟಿ ವೈದ್ಯ ಡಾ. ಸೀತಾರಾಮ್ ಸುಟ್ಟ, (ಎಸ್. ಎಸ್ ರಾಮ್) ಕೈರಂಗಳ 64.  ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾದರು.

ಕಳೆದ ಒಂದೂವರೆ ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ತಕ್ಕ ಮಟ್ಟಿಗೆ ಗುಣಮುಖರಾಗಿದ್ದ ಅವರನ್ನು ಕೊನೆಗೆ ನಿಮೋನಿಯ ತೀವ್ರವಾಗಿ ಕಾಡಿತ್ತು. ಬುಧವಾರ ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ತಂದೆ ರಾಮ ಪಂಡಿತರಿಂದ ನಾಟಿ ವೈದ್ಯಕೀಯ ಮತ್ತು ಆಯುರ್ವೇದ ಕಲಿತ ಡಾ. ಸೀತಾರಾಮ್ 1974ರಲ್ಲಿ ಬೆಂಗಳೂರಿನಲ್ಲಿ ಹೋಮಿಯೋಪತಿಕ್ ಮತ್ತು ಆಯುರ್ವೇದ, 1976ರಲ್ಲಿ ಚೆನ್ನೈನಲ್ಲಿ ಡಿಎಂಪಿ (ಎ) ಹಾಲೊಪತಿಕ್ ಪದವಿಯನ್ನು ಪಡೆದಿದ್ದರು.

1979 ರಿಂದ ಸುಮಾರು 42 ವರ್ಷಗಳಿಂದ ವಾತ (ಪಾಕ್ಷಪಾತ), ಗಂಟು ನೋವು, ಮೊದಲಾದ ಖಾಯಿಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಪ್ರಸಿದ್ದರಾಗಿದ್ದರು. ದಕ್ಷಿಣ ಕನ್ನಡ ಮಾತ್ರವಲ್ಲದೆ ಗದಗ, ಸಕಲೇಶಪುರ ಮೈಸೂರಿನಿಂದ ಇವರ ಬಳಿ ಚಿಕಿತ್ಸೆಗೆ ಬರುತ್ತಿದ್ದರು. ಬಡ ರೋಗಿಗಳಿಂದ ಯಾವತ್ತೂ ಹಣ ಪಡೆಯದೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು.

ವೈದ್ಯಕೀಯವಲ್ಲದೆ ಧಾರ್ಮಿಕವಾಗಿಯೂ ತನ್ನ ಸೇವೆಮಾಡುತ್ತಿದ್ದರು. ನರಿಂಗಾನ ಮಲರಾಯ ದೈವದ ಸೇವೆ ಮಾಡುತ್ತಿದ್ದುದಲ್ಲದೆ, ಬೆಳ್ಳಿ ಮುಖವಾಡ , ದೈವದ ಅಣಿಗೆ ಬೆಳ್ಳಿಯ ಅಟ್ಟಣಿಗೆ ಸೇವಾ ರೂಪದಲ್ಲಿ ನೀಡಿದ್ದರು.

ಕೈರಂಗಳ ಗೋಪಾಲ ಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.  ಕೈರಂಗಳ ಗೋಪಾಲ ಕೃಷ್ಣದೇವಸ್ಥಾನ, ಶ್ರೀಕೃಷ್ಣ ಗೇಮ್ಸ್ ಟೀಮ್ ನಲ್ಲಿ ಸಲಹೆಗಾರರಿದ್ದರು. ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವಿತ್ತು, ಕೇಂದ್ರ ಸಾಹಿತ್ಯ ಪರಿಷತ್ ಮೈಸೂರು 2015  ರಲ್ಲಿ ಇವರ ವೈದ್ಯಕೀಯ ಸೇವೆಗೆ ‘ವೈದ್ಯ ರತ್ನ’ ಬಿರುದು ನೀಡಿ ಗೌರವಿಸಿದೆ.

ಮೃತರು ಪತ್ನಿ ಉಷಾ, ಮಕ್ಕಳಾದ ನವೀನ್, ನಮಿತಾ , ನವನೀತ್ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English