ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಸರಗೋಡು, ಕಾಂಞಂ ಗಾಡ್, ನೀಲೇಶ್ವರ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಸರಗೋಡು ನಗರಸಭೆಯು ಐಕ್ಯರಂಗದ ಪಾಲಾದರೆ, ಕಾಂಞಂಗಾಡ್, ನೀಲೇಶ್ವರ ನಗರ ಸಭೆಯಲ್ಲಿ ಮತ್ತೆ ಎಲ್‌ಡಿಎಫ್ ಅಧಿಕಾರಕ್ಕೇರಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ನ 15 ಸ್ಥಾನಗಳ ಪೈಕಿ ಬಿಜೆಪಿ 6, ಯುಡಿಫ್ 6, ಎಲ್ ಡಿ ಎಫ್ 2 ಮತ್ತು ಎಲ್ ಡಿ ಎಫ್ ಬೆಂಬಲಿತ 1 ಅಭ್ಯರ್ಥಿ ಜಯಗಳಿಸಿದ್ದಾರೆ. ಮಂಜೇಶ್ವರ ಬ್ಲಾಕ್ ಸಂಭಂದಿಸಿದಂತೆ ಜಿಲ್ಲಾ ಪಂಚಾಯತ್ ನ 4 ಸ್ಥಾನಗಳ ಪೈಕಿ, ಬಿಜೆಪಿ 1, ಯುಡಿಎಫ್ 3 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ವರ್ಕಾಡಿ ನಾಲ್ಕನೇ ಡಿವಿಷನ್ ನಲ್ಲಿ 21 ಸ್ಥಾನಗಳ ಪೈಕಿ ಬಿಜೆಪಿ6, ಯುಡಿಎಫ್ 6, ಯುಡಿಎಫ್ ಬೆಂಬಲಿತ 2, ಎಲ್ ಡಿ ಎಫ್ 2, ಎಲ್ ಡಿ ಎಫ್ ಬೆಂಬಲಿತ 1, ಎಸ್ಡಿಪಿಐ 2 ಸ್ಥಾನಗಳನ್ನು ಪಡೆದಿದೆ.
ಕಾಸರಗೋಡು ನಗರಸಭೆಯ 38 ವಾರ್ಡ್‌ಗಳ ಪೈಕಿ 21 ಸ್ಥಾನಗಳನ್ನು ಐಕ್ಯರಂಗ ಪಡೆದುಕೊಂಡು ಅಧಿಕಾರಕ್ಕೇರಿದೆ. ಉಳಿದ 14 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂ ಡಿದೆ. ಸಿಪಿಎಂ-1, ಮುಸ್ಲಿಂ ಲೀಗ್ ಬಂಡಾಯ-1, ಸ್ವತಂತ್ರ-1 ಸ್ಥಾನಗಳನ್ನು ಪಡೆದುಕೊಂಡಿವೆ. 21 ಸೀಟುಗಳನ್ನು ಗೆದ್ದು ಐಕ್ಯರಂಗ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 14 ಸೀಟುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಕಾಸರಗೋಡು ನಗರಸಭೆಯ ಚೇರಂಗೈ ಕಡಪ್ಪುರದಲ್ಲಿ ಮುಸ್ಲಿಂ ಲೀಗ್‌ನ ಮುಸ್ತಾಫಾ, ಚೇರಂಗೈ ಈಸ್ಟ್‌ನಲ್ಲಿ ಅಬ್ಟಾಸ್ ಬೀಗಂ, ಅಡ್ಕತ್ತಬೈಲ್ ವಾರ್ಡ್‌ನಲ್ಲಿ ಶಂಸೀದಾ ಫಿರೋಜ್, ತಾಳಿಪಡು³ನಲ್ಲಿ ಅಶ್ವಿನಿ, ಕರಂದಕ್ಕಾಡ್‌ನಲ್ಲಿ ಹೇಮಲತಾ ಎ., ಆನೆಬಾಗಿಲಿನಲ್ಲಿ ಪವಿತ್ರಾ ಕೆ.ಜಿ., ನುಳ್ಳಿಪ್ಪಾಡಿಯಲ್ಲಿ ವರಪ್ರಸಾದ್ ಕೋಟೆಕಣಿ, ನುಳ್ಳಿಪ್ಪಾಡಿ ನಾರ್ತ್‌ನಲ್ಲಿ ಶಾರದಾ, ಅಣಂಗೂರಿನಲ್ಲಿ ಪಿ. ರಮೇಶ್, ನೆಲ್ಕಳದಲ್ಲಿ ಸವಿತಾ ಟೀಚರ್, ಫಿಶ್ ಮಾರ್ಕೆಟ್‌ನಲ್ಲಿ ಹಸೀನಾ ನೌಶಾದ್, ಹೊನ್ನೆಮೂಲೆಯಲ್ಲಿ ಶಕೀನಾ ಮೊದೀನ್, ತೆರುವತ್‌ನಲ್ಲಿ ಅಫೀಲಾ ಬಶೀರ್, ಪಳ್ಳಿಕ್ಕಾಲ್‌ನಲ್ಲಿ ಸಫಿಯಾ ಮೊದೀನ್, ಖಾಸೀಲೈನ್‌ನಲ್ಲಿ ವಿ.ಎಂ. ಮುನೀರ್, ತಳಂಗರೆ ಬಾಂಗೋಡಿನಲ್ಲಿ ಇಕ್ಬಾಲ್ ಬಾಂಗೋಡು, ತಳಂಗರೆ ಜದೀದ್ ರೋಡ್‌ನಲ್ಲಿ ಸಹೀರ್ ಆಸಿಫ್, ತಳಂಗರೆ ಕಂಡತ್ತಿಲ್ ವಾರ್ಡ್‌ನಲ್ಲಿ ಸಿದ್ಧೀಕ್ ಚಕ್ಕರ, ತಳಂಗರೆ ಕೆ.ಕೆ. ಪುರಂನಲ್ಲಿ ರೀತಾ ಆರ್., ತಳಂಗರೆ ಪಡಿಂಞರ್‌ನಲ್ಲಿ ಸುಮಯ್ಯ ಮೊದೀನ್, ತಳಂಗರೆ ದೀನಾರ್ ನಗರ್‌ನಲ್ಲಿ ಸಕರಿಯಾ ಎಂ. ತಾಯಲಂಗಾಡಿ ವಾರ್ಡ್‌ನಲ್ಲಿ ಮಹಮ್ಮದ್ ಕುಂಞಿ ತಾಯಲಂಗಾಡಿ ಜಯಗಳಿಸಿದರು.
ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕಾನೂನು-ಶಾಂತಿ ಪಾಲನೆ ಖಚಿತಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 10 ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ. ಡಿ. 17 ರಂದು ರಾತ್ರಿ 12 ಗಂಟೆ ವರೆಗೆ ಸಿ.ಆರ್. ಪಿ.ಸಿ. 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣರೂಪದಲ್ಲಿ, ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳೆ ಪೇಟೆ, ಬಂದ್ಯೋಡು, ಅಡ್ಕ, ಸೀತಾಂಗೋಳಿ, ಉಳುವಾರು, ಮೊಗ್ರಾಲ್, ಬಂಬ್ರಾಣ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ, ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು, ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನ, ಇರಿಯಣ್ಣಿ, ಅಡೂರು, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂಞಂಗಾಡ್ ನಗರಸಭೆ, ಅಜಾನೂರು ಗ್ರಾ.ಪಂ., ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಲೂರು-ಪೆರಿಯ ಗ್ರಾ.ಪಂ., ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನ, ಚೆರುವತ್ತೂರು, ಪಿಲಿಕೋಡ್ ಗ್ರಾ.ಪಂ., ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲೇಶ್ವರ ನಗರಸಭೆ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಂಡಿದೆ.
Click this button or press Ctrl+G to toggle between Kannada and English