ಬಜ್ಪೆ ವಿಮಾನ ನಿಲ್ದಾಣದಲ್ಲಿ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

10:17 PM, Thursday, December 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tajudinಮಂಗಳೂರು :  ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ.

ಕೇರಳದ ಚಿತ್ತಾರಿ ಬಾರಿಕ್ಕಾಡ್ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿ. ಈತ ಗುರುವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಸಂಜೆ 4:30ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದು, ತಪಾಸಣೆ ವೇಳೆ ಯೂರೊ ಹಾಗು ಯುಎಇ ದಿರ್ಹಾಮ್ ಪತ್ತೆಯಾಗಿದೆ. ಧರಿಸಿದ್ದ ಒಳ ಬಟ್ಟೆಯ ಒಳಗಡೆ ಇಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಸಿಐಎಸ್‌ಎಫ್ ಅಧಿಕಾರಿ ದೇವೇಂದರ್ ಸಿಂಗ್ ತಪಾಸಣೆ ನಡೆಸಿ ಅಕ್ರಮ ಸಾಗಾಟದ ವಿದೇಶಿ ಕರೆನ್ಸಿ ಪತ್ತೆ ಮಾಡಿದ್ದಾರೆ. ಆರೋಪಿ ಸಹಿತ ಸೊತ್ತನ್ನು ಮುಂದಿನ ತನಿಖೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

Tajudin

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English