ರೋಸಾ ಮಿಸ್ತಿಕಾ ಪ್ರಾಂಶುಪಾಲೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

5:02 PM, Thursday, December 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Rosa Mystica students Protestಮಂಗಳೂರು :ಗುರುಪುರ – ಕೈಕಂಬದ ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ವಿಧ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ ಘಟನೆ ನಡೆದಿದೆ. ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಓದುತ್ತಿರುವ ನಾಲ್ವರು ವಿದ್ಯಾರ್ಥಿಗಳು ಶಬರಿಮಲೆಗೆ ಹೊಗುವ ನಿಮಿತ್ತ ಅಯ್ಯಪ್ಪ ವ್ರತಾಚರಣೆಯಲ್ಲಿದ್ದು ಮಾಲೆ ಹಾಗೂ ಕಪ್ಪು ಶಾಲು ಧರಿಸಿಕೊಂಡು ತರಗತಿಗೆ ಹಾಜರಾಗುತ್ತಿದ್ದರು ಆದರೆ ಇದಕ್ಕೆ ಪ್ರಾಂಶುಪಾಲೆ ಜೆಸ್ಸಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಲ್ಲದೆ, ಧರ್ಮವನ್ನು ಅವ್ಯಾಚವಾಗಿ ನಿಂದಿಸುತ್ತಿದ್ದರೆನ್ನಲಾಗಿದೆ.

ಬುಧವಾರ ಮುಂಜಾನೆಯೂ ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಿದ ಇವರು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಹಾಕಿದ್ದಾರೆ ಇದರಿಂದ ಆಕ್ರೊಶಗೊಂಡ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಇತರೆ ವಿದ್ಯಾರ್ಥಿಗಳು ಕೂಡ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜ್ ಗೇಟ್ ನ ಹೊರಗಡೆ ಪ್ರತಿಭಟನೆ ನಡೆಸಿ ಪ್ರಾಂಶುಪಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸ್ ಠಾಣ ಇನ್ಸ್ ಪೆಕ್ಟರ್ ಹಾಗೂ ಕಾಲೇಜು ಆಡಳಿತ ಮಂಡಳಿ ಸಂಚಾಲಕಿ ಕನ್ಸೆಟ್ಟಾ ಸಿ. ಸ್ಥಳಕ್ಕಾಗಮಿಸಿ ಮಾತುಕತೆಗೆ ಕರೆದರೂ ಇದನ್ನು ವಿದ್ಯಾರ್ಥಿಗಳು ಒಪ್ಪಲಿಲ್ಲ.

ನಂತರ ಜಿಲ್ಲಾಪಂಚಾಯತ್ ನ ಮಾಜಿ ಸದಸ್ಯ ವಿನೋದ್ ಮಾಡ, ಪೊಳಲಿಯ ಚೈತನ್ಯಾನಂದ ಸ್ವಾಮೀಜಿ ಹಾಗೂ ತಾಲೂಕು ಪಂಚಾಯತಿ ಸದಸ್ಯರು ಮತ್ತು ಸ್ಥಳೀಯರು ಸ್ಥಳಕ್ಕಾಗಮಿಸಿ, ವಿದ್ಯಾರ್ಥಿಗಳನ್ನು ಕಾಲೇಜು ಆವರಣದಲ್ಲಿ ಸೇರಿಸಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಜೊತೆ ಚರ್ಚಿಸಿದ ನಂತರ. ಶಿಕ್ಷಣ ಸಂಸ್ಥೆಗೆ ಸಮಸ್ಯೆಯ ಇತ್ಯರ್ಥಕ್ಕೆ ಒಂದು ವಾರಗಳ ಗಡುವು ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ರೋಸಾ ಮಿಸ್ತಿಕಾ ಶಿಕ್ಶಣ ಸಂಸ್ಥೆಯ ಪ್ರಾಂಶುಪಾಲೆ ಜೆಸ್ಸಿ ಕ್ರಾಸ್ತಾ ಮೇಲೆ ಇಂತಹ ಆರೋಪ ಇದೇ ಮೊದಲ ಬಾರಿ ಕೇಳಿ ಬರುತ್ತಿರಿವುದೇನಲ್ಲ. ಬದಲಿಗೆ ಈ ಹಿಂದೆಯೂ ಕೂಡ ವಿದ್ಯಾರ್ಥಿನಿಯರು ಹೂ ಮುಡಿದುಕೊಂಡು ಬರಬಾರದು, ಹಾಗೂ ಮುಸ್ಲಿಂಮ್ ವಿದ್ಯಾರ್ಥಿಗಳು ಶುಕ್ರವಾರ ನಮಾಜ್ ನಿರ್ವಹಿಸುವುದಕ್ಕೆ ಮತ್ತು ಕಾಲೇಜ್ ವಿದ್ಯಾರ್ಥಿನಿಯರು ಹುಡುಗರ ಜೊತೆ ಮಾತಾಡಕೂಡದು ಹೀಗೆ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ಪ್ರಾಂಶುಪಾಲೆಯ ಈ ವರ್ತನೆಯಿಂದ ಶಿಕ್ಷಣ ಸಂಸ್ಥೆ ಹಲವಾರು ಬಾರಿ ಚರ್ಚೆಗೆ ಗ್ರಾಸವಾಗಿದ್ದು ಇದರ ವಿರಿದ್ಧ ಶಿಕ್ಶಣ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English