ಉಜಿರೆಯ ಎಂಟರ ಬಾಲಕ ಅನುಭವ್ ಕೋಲಾರದಲ್ಲಿ ಪತ್ತೆ, ಆರು ಮಂದಿ ಅಪಹರಣಕಾರರು ವಶಕ್ಕೆ

3:32 PM, Saturday, December 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Anubhavಬೆಳ್ತಂಗಡಿ : ಉಜಿರೆಯ ಎಂಟರ ಹರೆಯದ ಬಾಲಕ ಅನುಭವ್ ನನ್ನು ಕೋಲಾರದಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು  ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5ರ ಹೊತ್ತಿಗೆ ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನೂ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು ಕೋಲಾರದಿಂದ ವಿಶೇಷ ತನಿಖಾ ತಂಡ ಪ್ರಯಾಣ ಆರಂಭಿಸಿದೆ.

ಕೋಲಾರದ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಮಂಜುನಾಥ್ ಎಂಬಾತನ ಮನೆಯಲ್ಲಿ ಮಗುವನ್ನು ಬಚ್ಚಿಡಲಾಗಿತ್ತು. ಆತನ ಮೊಬೈಲ್ ಅನ್ನು ಉಪಯೋಗಿಸಿ ಅಪಹರಣಕಾರರು ಕರೆ ಮಾಡಿದ್ದಾರೆ ಎನ್ನಲಾಗಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈತನನ್ನು ವಶಕ್ಕೆ ಪಡೆದು ಅಪರಹಣವನ್ನ ಪತ್ತೆಹಚ್ಚಿದ್ದಾರೆ. ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿಂದ‌ ಮಂಗಳೂರಿನ ಪೊಲೀಸ್ ತಂಡ ಬಂಧನ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಮಂಡ್ಯದ ಗಂಗಾಧರ್ ಸೇರಿದಂತೆ ನಾಲ್ವರು ಕಿಡ್ನಾಪರ್ಸ್ ಎಂದು ಪ್ರಾಥಮಿಕ ವರದಿ ಇದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಉದ್ಯಮಿ ಬಿಜೊಯ್ ಅವರ ಪುತ್ರ ಅನುಭವ್ ನನ್ನು ಪೊಲೀಸರು 36 ಗಂಟೆಗಳಲ್ಲಿ ಯಶಸ್ವಿ ಕಾರ್ಯಾಚರಣೆಯ ಮೂಲಕ  ಯಾವುದೇ ಅಪಾಯವಿಲ್ಲದೆ ಪಾರು ಮಾಡಿ ಆರೋಪಿಗಳನ್ನು ಬಂಧಿಸಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English