ಸುಬ್ರಹ್ಮಣ್ಯ : ದಕ್ಷಿಣ ಭಾರತದ ಪ್ರಮುಖ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ ಮಹೊತ್ಸವ ಸಂಪನ್ನಗೊಂಡಿದೆ.
ದೇವಳದ ರಾಜಮಾರ್ಗದಲ್ಲಿ ಯಶಸ್ವಿನಿ ಅನೆಯೊಂದಿಗೆ ಸಂಭ್ರಮದ ಬ್ರಹ್ಮರಥೋತ್ಸವ ಜರಗಿತು.ಕೋಟ್ಯಾಂತರ ಭಕ್ತರ ಅರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ ಮುಂಜಾನೆಯ 7.25 ರ ಧನು ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥದಲ್ಲಿ ರಥಾರೂಢನಾಗಿ ಭಕ್ತರಿಗೆ ದರ್ಶನ ನೀಡಿದ್ದಾನೆ. ಕೋವಿಡ್ ಕಾರಣದಿಂದಾಗಿ ಪರ ಊರಿನ ಭಕ್ತರಿಗೆ ಪ್ರವೇಶ ನಿರ್ಬಂನಿರ್ಬಂಧವಿದ್ದರೂ ಕೂಡಾ ಅಪಾರ ಸಂಖ್ಯೆಯಲ್ಲಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ನೋಡಿ ಕಣ್ತುಂಬಿಕೊಂಡರು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಡೆಸ್ನಾನವನ್ನು ರದ್ದುಪಡಿಸಲಾಗಿತ್ತು. ಆದರೆ ಕೆಲವೇ ಕೆಲವು ಮಂದಿ ಬೀದಿ ಮಡೆ ಸ್ನಾನ ಮಾಡುವ ದೃಶ್ಯ ಕಂಡು ಬಂತು. ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ವೇಳೆ ಸಂತೆ ವ್ಯಾಪಾರ ಅಂಗಡಿಗಳನ್ನು ನಿರ್ಬಂಧಿಸಲಾಗಿದೆ. ಜಾತ್ರಾ ವೇಳೆ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ನಿಯಮ ಪಾಲನೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು.
ಚಿತ್ರ : ಶಾಂತಲಾ ಸ್ಟುಡಿಯೋ
Click this button or press Ctrl+G to toggle between Kannada and English