ಮಂಗಳೂರು : ಗ್ರಾಮ ಪಂಚಾಯತ್ ಗಳಿಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 10 ಗಂಟೆ ವೇಳೆಗೆ ಮಂಗಳೂರು ತಾಲೂಕಿನಲ್ಲಿ 14.6 ಶೆ., ಮೂಡುಬಿದರೆ15.64 ಶೇ. ಹಾಗೂ ಬಂಟ್ಟಾಳ ತಾಲೂಕಿನಲ್ಲಿ 13.75 ಶೇ. ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 14.48 ಶೇ. ಮತದಾನವಾಗಿರುವುದು ವರದಿಯಾಗಿದೆ.
ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಥರ್ಮಾಮೀಟರ್ ನಲ್ಲಿ ದೇಹದ ಉಷ್ಣತೆ ಪರೀಕ್ಷೆ ಮಾಡಿ ಮತದಾರರನ್ನು ಮತಗಟ್ಟೆಯೊಳಗೆ ಬಿಡುತ್ತಿದ್ದಾರೆ.
ದ.ಕ. ಜಿಲ್ಲೆಯ ಗಡಿ ಭಾಗವಾದ ತಲಪಾಡಿಯ ದ.ಕ. ಜಿ.ಪಂ. ಸರಕಾರಿ ಪ್ರೌಢಶಾಲೆಯ 246 ಎ ಮತಗಟ್ಟೆಯ ಬೆಳಗ್ಗೆ 9:30ರ ವೇಳೆಗೆ 829 ಮತದಾರರ ಪೈಕಿ 140 ಮಂದಿ ಹಾಗೂ 247ನೇ ಮತಗಟ್ಟೆಯಲ್ಲಿ 754 ಮತದಾರರ ಪೈಕಿ 162 ಮಂದಿ ಮತದಾನ ಮಾಡಿದ್ದು, ಶೇ.21 ಮತದಾನ ದಾಖಲಾಗಿದೆ.
ಮಾಜಿ ಸಚಿವ ಬಿ.ರಮಾನಾಥ ರೈ ಇಂದು ಬೆಳಗ್ಗೆ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಂಬಿಲ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದಕ್ಕೂ ಮೊದಲು ಅವರು ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು
ಶಾಸಕ ಯು.ಟಿ.ಖಾದರ್ ಅವರು ಬೋಳಿಯಾರ್ ರಂತಡ್ಕ ಜಾರದಗುಡ್ಡೆ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಜಿಲ್ಲೆಯ 106 ಗ್ರಾಮ ಪಂಚಾಯತ್ ನ 1631 ಮತಕ್ಷೇತ್ರಗಳಿಗೆ ಚುನಾವಣೆ ಮೊದಲ ಹಂತ ದಲ್ಲಿ ನಡೆಯುತ್ತಿದೆ.
ಒಟ್ಟು ಮತಕ್ಷೇತ್ರಗಳು 1681 ಆಗಿದ್ದು, 50 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 3845 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
Click this button or press Ctrl+G to toggle between Kannada and English