ಮಂಜೇಶ್ವರ : ಕಾಞಂಗಾಡ್ ನ ಡಿವೈಎಫ್ಐ ಕಾರ್ಯಕರ್ತ ಕಾಂ. ಅಬ್ದುಲ್ ರೆಹಮಾನ್ ರವರನ್ನು ಕೊಲೆ ಮಾಡಿದ ಮುಸ್ಲಿಂ ಲೀಗ್ ಗೂಂಡಾಗಳ ದುಷ್ಕ್ರತ್ಯವನ್ನು ಖಂಡಿಸಿ ಡಿವೈಎಫ್ಐ ಕೊಡ್ಲಮೊಗರು ವಿಲ್ಲೇಜ್ ಸಮಿತಿಯ ನೇತ್ರತ್ವದಲ್ಲಿ ಬಾಕ್ರಬೈಲ್ ಜಂಕ್ಷನ್ ನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಮುಸ್ಲಿಂ ಲೀಗ್ ನ ಕೊಲೆ ರಾಜಕೀಯದ ವಿರುದ್ದ ಆವೇಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೇರಳದ ಜನತೆ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರೂ,CPIM ನಾಯಕರಾದ ಮೊಯಿದಿನ್ ಕುಂಞ ತಲಕ್ಕಿಯವರು, ಜನತೆಯ ಬದುಕಿನ ರಾಜಕೀಯವನ್ನೇ ಪ್ರಮುಖ ಅಜೆಂಡಾವನ್ನಾಗಿಸಿದ ಕೇರಳದ LDF ಸರಕಾರದ ಸಾಧನೆಯನ್ನು ದೇಶ ವಿದೇಶಗಳಲ್ಲಿ ಕೊಂಡಾಡುವ ಈ ಸಂಧರ್ಭದಲ್ಲಿ ಹತಾಶೆಗೊಂಡಿರುವ ಮುಸ್ಲಿಂ ಲೀಗ್ ತನ್ನ ಕೋಮುವಾದಿ ಅಜೆಂಡಾವನ್ನು ಬಿಚ್ಚಿಟ್ಟು ಅಮಾಯಕ ಮುಸ್ಲಿಂ ಯುವಕರನ್ನೇ ಟಾರ್ಗೆಟ್ ಇಟ್ಟು ಕೊಲೆ ರಾಜಕೀಯ ನಡೆಸುತ್ತಿರುವ ಮೂಲಕ ತನ್ನ ನೀಚ ಬುದ್ದಿಯನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ CPIM ಮಂಜೇಶ್ವರ ಏರಿಯಾ ಸಮಿತಿ ಸದಸ್ಯರೂ,ವರ್ಕಾಡಿ ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ ಎಸ್.ರವರು, ಇತ್ತೀಚಿಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ LDF ಗಳಿಸಿದ ಭರ್ಜರಿ ಜಯ ವಿರೋಧಿ ಕೂಟ UDF ನ ನಿದ್ದೆಗೆಡಿಸಿದೆ. ಮಾತ್ರವಲ್ಲದೆ ಮುಸ್ಲಿಂ ಲೀಗ್ ನ ಕುತಂತ್ರ ರಾಜಕಾರಣವನ್ನು ಕೇರಳದ ಮುಸ್ಲಿಂ ಜನತೆ ಖಡಾತುಂಡವಾಗಿ ವಿರೋಧಿಸಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CPIM ಕೊಡ್ಲಮೊಗರು ಲೋಕಲ್ ಸಮಿತಿ ಸದಸ್ಯರಾದ ರವೀಂದ್ರ ಎಂ.ರವರು, ಜನರ ಬದುಕಿನ ಬಗ್ಗೆ ನಿತ್ಯ ನಿರಂತರವಾಗಿ ಹೋರಾಡುವ ಡಿವೈಎಫ್ಐ ಕಾರ್ಯಕರ್ತರನ್ನು ಇನ್ನಿಲ್ಲವಾಗಿಸುವ ಮೂಲಕ ಎಡಪಂಥೀಯ ವಿಚಾರಧಾರೆಯನ್ನು ನಾಶ ಮಾಡಲು ಯಾವತ್ತೂ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯ ನೇತ್ರತ್ವವನ್ನು ಡಿವೈಎಫ್ಐ ಕೊಡ್ಲಮೊಗರು ವಿಲ್ಲೇಜ್ ಸಮಿತಿಯ ನಾಯಕರಾದ ಆಶ್ರಪ್ ಬಾಕ್ರಬೈಲ್,ಸುಜಿತ್ ಕುಮಾರ್, ಯಶೋಧ, ಅಬ್ದುಲ್ಲಾ ಕುಂಞ,ಆನಂದ ಕಂಪ,ಆರೀಸ್, ಇಬ್ರಾಹಿಂ, ಬಶೀರ್,ಇಸ್ಮಾಯಿಲ್,CPIM ನಾಯಕರಾದ ಅಬೂಬಕ್ಕರ್, ಲೋಕೇಶ್ ಶೆಟ್ಟಿ,ಸೀತಾರಾಮ ಕಂಪ,ಮೊಹಮ್ಮದ್ ರಪೀಕ್,ಅಹಮ್ಮದ್ ಕುಂಞ, ಸಂಜೀವ ಎಂ ಮುಂತಾದವರು ವಹಿಸಿದ್ದರು.
Click this button or press Ctrl+G to toggle between Kannada and English