ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ 52.64 ಮತದಾನ

3:13 PM, Sunday, December 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vote ಮಂಗಳೂರು : ದ.ಕ. ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬೆಳ್ತಂಗಡಿ.  53.35 , ಪುತ್ತೂರು. 52.85, ಸುಳ್ಯ.51.37 ,ಕಡಬ  52.07  ಮತದಾನವಾಗಿದ್ದು  ಜಿಲ್ಲೆಯಲ್ಲಿ  ಒಟ್ಟು.52.64 ಮತದಾನವಾಗಿದೆ.

ಬೆಳಗ್ಗೆ 9 ಗಂಟೆಯ ಬಳಿಕ ಮತಗಟ್ಟೆಗಳಿಗೆ ಮತದಾರರು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು ಮತದಾನ ಬಿರುಸಿನಿಂದ ಸಾಗಿದೆ.

ಎರಡನೇ ಹಂತದಲ್ಲಿ ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 11,541 ಸ್ಥಾನಗಳಿಗೆ ಚುನಾವಣೆ ನಡೆ ಯಬೇಕಿತ್ತು. ಆ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ ಇಂದು 1,500 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅನುಸೂಚಿತ ಜಾತಿಯ 371, ಅನುಸೂಚಿತ ಪಂಗಡದ 272, ಹಿಂದುಳಿದ ಅ ವರ್ಗದ 699, ಹಿಂದುಳಿದ ಬಿ ವರ್ಗದ 138, ಸಾಮಾನ್ಯ 1,921 ಅಭ್ಯರ್ಥಿಗಳು ಸೇರಿದ್ದಾರೆ.

ವಿಕಲಚೇತನರು, ಅನಾರೋಗ್ಯ ಪೀಡಿತ ಮತದಾರರನ್ನು ಮತಗಟ್ಟೆಯ ಸಮೀಪದವರೆಗೆ ವಾಹನಗಳಲ್ಲಿ ಕರೆಯಲಾಗುತ್ತಿದೆ. ಮತಗಟ್ಟೆಗಳಲ್ಲಿ ಆಶಾಕಾರ್ಯಕರ್ತರು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮತದಾರರಲ್ಲಿ ಮನವಿ ಮಾಡಿಕೊಳ್ಳುವ ಜತೆಗೆ ಸ್ಯಾನಿಟೈಸರ್ ನೀಡಿ ಥರ್ಮಾಮೀಟರ್ ನಲ್ಲಿ ಮತದಾರನ್ನು ಪರೀಕ್ಷೆ ಗೊಳಪಡಿಸುತ್ತಿದ್ದಾರೆ‌.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English