ಚಲನಚಿತ್ರ ನಟಿ ತಾರಾ ಕುಟುಂಬ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ

11:49 PM, Tuesday, January 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Taraಬಂಟ್ವಾಳ  : ಚಲನಚಿತ್ರ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಕುಟುಂಬ ಸೋಮವಾರ  ಪ್ರಸಿದ್ಧ ಕಾರಣಿಕದ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದರು.

ಕ್ಷೇತ್ರದ ಕಾರಣಿಕ ಶಕ್ತಿಯನ್ನು ನಂಬಿ ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ತಾಯಿ ದರ್ಶನ ಪಡೆಯುವುದಕ್ಕೆ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ತಾರ ಅವರ ತಾಯಿ ಪುಷ್ಪಮ್ಮ, ಉದ್ಯಮಿ ವೆಂಕಟೇಶ್, ಶ್ರೀ ಆದಿಮಾಯೆ ಮಹಾಲಕ್ಮೀ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, ನಟ ಹರೀಶ್ ಆಚಾರ್ಯ, ಜೀವನ ರತನ್, ಅರ್ಚಕ ವರ್ಗ, ಸಿಬ್ಬಂದಿ ಹಾಜರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English