ಮಂಗಳೂರು : ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನ ಎಲ್.ಪಿ.ಜಿ. ಪೈಪ್ ಲೈನ್ ಮತ್ತು ಪೆಟ್ರೋನೆಟ್ ಎಂ.ಹೆಚ್.ಬಿ. ಪೈಪ್ ಲೈನ್ ಸಂಯುಕ್ತಾಶ್ರಯದಲ್ಲಿ ಜಂಟಿ ಆಫ್ ಸೈಟ್ ಎಂಬ ಅಣುಕು ಪ್ರದರ್ಶನವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನ ಡೆಪ್ಯೂಟಿ ಜೆನರಲ್ ಮ್ಯಾನೇಜರ್ ಜಿ. ವಿನೋದ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಎಲ್.ಪಿ.ಜಿ. ಸೋರಿಕೆ ಸಂಬಂಧಿತ ತುರ್ತು ಸ್ಥಿತಿಗಳನ್ನು ನಿಭಾಯಿಸಲು ಹೆಚ್.ಪಿ.ಸಿ.ಎಲ್. ನೊಂದಿಗೆ ಎಲ್.ಪಿ.ಜಿ. ಪೈಪ್ ಲೈನ್‍ನ ಸಿದ್ಧತೆ ಮತ್ತು ಅತ್ಯಾಧುನಿಕ ಉಪಕರಣಗಳು ಲಭ್ಯವಿದೆ ಎಂದರು.
ಪೈಪ್ ಲೈನ್ ನಲ್ಲಿ ಯಾವುದೇ ತುರ್ತು ಸಂದರ್ಭಗಳಲ್ಲಿ ತೊಂದರೆ ಉಂಟಾದಲ್ಲಿ ಟೋಲ್ ಫ್ರೀ ಸಂಖ್ಯೆ 18001801276 ಗೆ ಕರೆ ಮಾಡಬಹುದು ಎಂದರು.
ಎಚ್.ಪಿ.ಸಿ.ಎಲ್. ಮತ್ತು ಪೆಟ್ರೋನೆಟ್ ನ ಪ್ರಯತ್ನಗಳನ್ನು ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ವೀಕ್ಷಿಸಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಪ್ರಮುಖ ಸೂಚನೆಗಳು ಮತ್ತು ಟೋಲ್ ಫ್ರೀ ಸಂಖ್ಯೆಯನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಗ್ರಾಮಸ್ಥರಿಗೆ ವಿತರಿಸಿದರು.
ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಸ್ತ್ರೀಕೋಟೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜಯ್ ಕುಮಾರ್, ವಿಭಾಗೀಯ ಅರಣ್ಯ ಅಧಿಕಾರಿ ಭರತ್ ಕುಮಾರ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೌಮ್ಯ ಹಾಗೂ ಇತರ ಸ್ಥಳೀಯ ಆಡಳಿತ ಮತ್ತು 200 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English