ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ವಾರ್ಷಿಕ ಜಾತ್ರಾ ಸಮಯದಂದು ಕ್ಷೇತ್ರದ ಕುಮಾರಧಾರಾ ನದಿಕಿನಾರೆಯಲ್ಲಿ ಮಿಂದು ಸುಮಾರು 2 ಕಿ.ಮೀ. ದೂರ ದೇವಸ್ಥಾನದ ವರೆಗೆ ಉರುಳುತ್ತಾ ಮಾಡುವ ವಿಶಿಷ್ಟವಾದ ಬೀದಿ ಮಡೆಸ್ನಾನದ ಹರಕೆ ಸೇವೆ ಗುರುವಾರ ಮುಂಜಾನೆ ಆರಂಭಗೊಂಡಿತು. ಶುಲ್ಕ ರಹಿತವಾದ ಈ ಸೇವೆ ನೂರಾರು ಭಕ್ತರಿಂದ ಷಷ್ಟಿ ಜಾತ್ರೆಯ ಮಹಾರಥೋತ್ಸವದ ವರೆಗೂ ನಡೆಯುತ್ತದೆ.
ಕುಮಾರಧಾರಾ ನದಿಯಲ್ಲಿ ಮಿಂದು ಅಲ್ಲಿಂದ ಉರುಳುತ್ತಾ ರಾಜರಸ್ತೆಯ ಮೂಲಕ, ರಥಬೀದಿಯ ಮೂಲಕ ಸಾಗಿ ದೇವಳದ ಹೊರಾಂಗಣಕ್ಕೆ ಬಂದು ಅಲ್ಲಿ ಒಂದು ಪ್ರದಕ್ಷಿಣೆ ಹಾಕಿ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯೆದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವ ಕ್ಷೇತ್ರದ ವಿಶೇಷ ಹರಕೆ ಸೇವೆ ಇದಾಗಿದೆ.
Click this button or press Ctrl+G to toggle between Kannada and English