ಮಂಗಳೂರು: ಮಂಜನಾಡಿ ಗ್ರಾಮದ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಕಾಗೆಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ.
ಹಕ್ಕಿಜ್ವರದ ಎಚ್ಚರಿಕೆ ಹಿನ್ನೆಲೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪಶು ರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ತಿಳಿಸಿದ್ದಾರೆ.
ಮಂಜನಾಡಿಯ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಒಂದೇ ಕಡೆ ಆರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದು ಮಂಗಳವಾರ ಪತ್ತೆಯಾಗಿತ್ತು. ಇದು ವಿಷಾಹಾರದಿಂದ ಸತ್ತಿದೆಯೇ ಅಥವಾ ವಿದ್ಯುತ್ ಆಘಾತಕ್ಕೊಳಗಾಗಿ ಸತ್ತಿದೆಯೇ ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದರು.
ಕಾಗೆಯ ಮೃತದೇಹದಲ್ಲಿ ವಿದ್ಯುತ್ ಆಘಾತದ ಕುರುಹುಗಳಿದ್ದು, ಕಾಗೆಗಳ ವರದಿಯು ಶನಿವಾರ ಬರುವ ಸಾಧ್ಯತೆ ಇದೆ.
Click this button or press Ctrl+G to toggle between Kannada and English