ಕರಂಗಲ್ಪಾಡಿಯಲ್ಲಿ ತಂದೂರು ಮದ್ಯದಂಗಡಿಯಿಂದ ಜನರಿಗೆ ತೊಂದರೆ

12:06 AM, Sunday, January 10th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

trv ಮಂಗಳೂರು : ವಿನಯ ಹಾಸ್ಪಿಟಲ್, ಶ್ರೀ ದೇವಿ ನರ್ಸಿಂಗ್ ಹೋಮ್, ಕೃಷ್ಣ ನರ್ಸಿಂಗ್ ಹೋಮ್ ಕ್ಯಾನ್ಸರ್ ಹಾಸ್ಪಿಟಲ್, ಸ್ಟಾರ್ ಕಿಡ್ಸ್ ಪ್ಲೇಸ್ಕೂಲ್, ಸೈಂಟ್ ಆಂತೋನಿ ಶ್ರೈನ್, ಚಂದ್ರಮೌಲೇಶ್ವರ ದೇವಸ್ಥಾನ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ಕೇಂದ್ರ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ಆಸುಪಾಸಿನಲ್ಲಿ ಆನಂದ, ಮಿಶ್ರಿ ಗಾರ್ಡನ್ ವಸತಿ ಸಂಕೀರ್ಣ ಸೇರಿದಂತೆ ಹಲವಾರು ವಸತಿ ಸಂಕೀರ್ಣ ಇಲ್ಲಿನ ಪ್ರದೇಶದ ಹಲವಾರು ವಿದ್ಯಾರ್ಥಿನಿಯರು, ಮಹಿಳೆಯರು, ಆಸ್ಪತ್ರೆ, ಸ್ಕೂಲ್‌ಗಳಿಗೆ ಇದೇ ಮದ್ಯದಂಗಡಿ ಬಳಿಯಿಂದಲೇ ಹಾದು ಹೋಗಬೇಕಾಗುತ್ತದೆ. ತಂದೂರು ಮದ್ಯದಂಗಡಿ ಪ್ರಾರಂಭವಾಗುವಾಗ ಚಿಕ್ಕದಾಗಿ ಪ್ರಾರಂಭಗೊಂಡಿತ್ತು. ಸುತ್ತಮುತ್ತಲ ಕಂಪೌಂಡ್ ಗೋಡೆ ಇದ್ದು, ಒಳಗೆ ವ್ಯವಹಾರ ನಡೆಯುತ್ತಿತ್ತು. ಇದೀಗ ಸರಕಾರ, ಮಹಾನಗರ ಪಾಲಿಕೆ ಕಾನೂನು ನಿಯಮ ಉಲ್ಲಂಘಿಸಿ ಸುತ್ತಮುತ್ತಲಿನ ಕಂಪೌಂಡ್ ಗೋಡೆಗೆ ಕಲ್ಲುಗಳನ್ನು ಕಟ್ಟಿ ಕಟ್ಟಡವನ್ನು ಏರಿಸಿ ತಂದೂರು ಮದ್ಯದಂಗಡಿಯನ್ನು ಬೃಹತ್ತಾಗಿ ವಿಸ್ತಾರಗೊಳಿಸಿರುತ್ತಾರೆ. ಹಾಗೂ ರಾಜಾರೋಷವಾಗಿ ಸದ್ರಿ ಪರಿಸರದಲ್ಲಿರುವ ಜೈಲ್, ಆಸ್ಪತ್ರೆ, ಸರಕಾರಿ ಕಚೇರಿಗಳು, ಸ್ಕೂಲ್-ಕಾಲೇಜಿಗೆ ಬರುವ ಹೋಗುವವರಿಗೆ ಮದ್ಯದಂಗಡಿಯಿಂದಾಗಿ ತುಂಬಾ ಕಿರಿಕಿರಿ ಅನುಭವಿಸುವಂತಾಗಿದೆ. ಸಮಾಜದ ಶಾಂತಿ ನೆಮ್ಮದಿ ಸ್ವಾಸ್ತ್ಯ ಹಾಳಾಗುತ್ತಿದೆ. ಆನಂದ ಅಪಾರ್ಟ್‌ಮೆಂಟ್ ತಳಮಹಡಿಯಿಂದ ಬರುವ ವಾಹನ ಸವಾರರಿಗೆ ಎದುರಿನ ರಸ್ತೆ ಕಾಣದಿರುವುದರಿಂದ ಅವರು ಸೀದಾ ರಸ್ತೆಗೆ ನುಗ್ಗುತ್ತಾರೆ. ಆ ಸಂದರ್ಭಗಳಲ್ಲಿ ಈ ಹಿಂದೆಯೂ ಹಲವಾರು ಅಪಘಾತಗಳಾಗಿರುತ್ತದೆ. ಈ ಪ್ರದೇಶದಲ್ಲಿ ಮದ್ಯದಂಗಡಿಗೆ ಬರುವ ಗ್ರಾಹಕರು ರಸ್ತೆಯ ಬದಿಯಲ್ಲಿ ಸಿಕ್ಕಸಿಕ್ಕಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಾರೆ. ಮಿಶ್ರಿ ಗಾರ್ಡನ್ ವಸತಿ ಸಂಕೀರ್ಣಕ್ಕೆ ಹೋಗುವ ಅಡ್ಡ ರಸ್ತೆಯಲ್ಲಿ ವಾಹನದಲ್ಲಿ ಕುಳಿತು ಮದ್ಯ ಸೇವಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ದಿನನಿತ್ಯ ಕೊರೊನಾ ರೋಗ ಮತ್ತು ಇನ್ನಿತರ ರೋಗವು ಹೆಚ್ಚಾಗುತ್ತಿದ್ದು ಮೂರು ಮೂರು ಪ್ರಮುಖ ಆಸ್ಪತ್ರೆ ಇದ್ದು ಇಂತಹ ಪರಿಸರದಲ್ಲಿ ಹೆಚ್ಚಾಗಿ ಅಂಬುಲೆನ್ಸ್‌ಗಳು ಬರುತ್ತಿರುತ್ತದೆ. ಪರಿಸರವನ್ನು ಟ್ರಾಫಿಕ್ ಮುಕ್ತವಾಗಿಸಬೇಕಾಗಿದ್ದು ನಮ್ಮ ಆದ್ಯ ಆದ್ಯ ಕರ್ತವ್ಯವಾಗಿರುತ್ತದೆ. ಸದ್ರಿ ಸಮಯದಲ್ಲಿ ನಮಗೆ ಮದ್ಯದಂಗಡಿಯಿಂದ ಮುಖ್ಯವಾಗಿ ಉತ್ತಮ ಜನರ ಸೇವೆ ಸಲ್ಲಿಸುತ್ತಿರುವ 3 ಆಸ್ಪತ್ರೆಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತುಳುನಾಡ ರಕ್ಷಣಾವೇದಿಕೆ  ಮನವಿ  ಮಾಡಿ ಕೊಂಡಿದೆ

ಸದ್ರಿ ಪ್ರದೇಶದಲ್ಲಿ ಹಲವಾರು ಉತ್ತಮ ಸಾರ್ವಜನಿಕ ಅಗತ್ಯತೆಯ ಕೇಂದ್ರಗಳಿದ್ದು ಈ ಕಾರಣಗಳಿಂದಾಗಿ ಕೂಡಲೇ ಮದ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸಿದ್ದಲ್ಲಿ ಜನರಿಗೆ ಶಾಶ್ವತ ಪರಿಹಾರ ಸಿಗುವುದು ಅಲ್ಲಿನ ಜನರು ನೆಮ್ಮದಿಯಿಂದ ಬಾಳುವಂತಾಗುತ್ತದೆ. ಮದ್ಯದಂಗಡಿಯ ವ್ಯಾಪಾರ ಪರವಾನಿಗೆಯನ್ನು ನವೀಕರಿಸಬಾರದಾಗಿ ವಿನಂತಿ. ನವೀಕರಿಸುವ ಸಂದರ್ಭದಲ್ಲಿ ನ್ಯೂನತೆಗಳ ಪರಾಮರ್ಶೆ ಮಾಡಬೇಕಾಗಿ ಮತ್ತು ನ್ಯೂನತೆಗಳನ್ನು ಸರಿಪಡಿಸದೇ ಪರವಾನಿಗೆ ನವೀಕರಿಸಿದಲ್ಲಿ ನವೀಕರಣ ಪರವಾನಿಗೆಗೆ ಸಹಿ ಹಾಕಿದ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದೆ.

ನವೆಂಬರ್ ನಲ್ಲಿ  ಮೇರಿಹಿಲ್ ಅಬಕಾರಿ ಭವನ ಎದುರುಗಡೆ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಸದ್ರಿ ಮೇಲಿನ ದೂರಿನ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಭಟನಾ ಸಭೆಯನ್ನು ಮುಂದೂಡಲಾಗಿತ್ತು. ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ  ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ತುಳುನಾಡ ರಕ್ಷಣಾವೇದಿಕೆ   ಮೇಲ್ಮನವಿ ಸಲ್ಲಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English