ಏಕಾಏಕಿ ಸಾಲಗಾರರ ಆಸ್ತಿ ಜಪ್ತಿ ಮಾಡಲು ಆದೇಶಿಸುವುದು ಕಾನೂನಿಗೆ ವಿರೋಧವಾಗಿದೆ

12:37 AM, Sunday, January 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

puclಮಂಗಳೂರು  : ಆರ್.ಬಿ. ಐ ವರದಿ ಪ್ರಕಾರ ಕಳೆದ ಹಣ ಕಾಸು ವರ್ಷದಲ್ಲಿ ದೇಶದಲ್ಲಿ 1.80 ಲಕ್ಷ ಕೋಟಿ ರೂಪಾಯಿ ವಂಚನೆ ಸೃಷ್ಟಿಯಾಗಿದ್ದು,ಸರ್ಫೆಸಿಯ ಕಾನೂನು ಪ್ರಕಾರ ಬ್ಯಾಂಕ್ ವಸೂಲಾತಿ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗಳು ಸಮರ್ಪಕ ಪ್ರೊಸೀಡಿಂಗ್ಸ್ ನಡೆಸದೆ ಏಕಾಏಕಿ ಸಾಲಗಾರರ ಆಸ್ತಿ ಜಪ್ತಿ ಮಾಡಲು ಆದೇಶಿಸುವುದು ಕಾನೂನಿಗೆ ವಿರೋಧವಾಗಿದೆ. ಮುಂದೆ ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳಲ್ಲಿ, ಬ್ಯಾಂಕ್ ಗಳ ವಸೂಲಾತಿ ಅರ್ಜಿ ಆದೇಷಗಳಲ್ಲಿ,ಬ್ಯಾಂಕ್ ಸಲ್ಲಿಸುವ ದಾಖಲೆಗಳು ಸಮರ್ಪಕ ವಾಗಿದೆಯೆ ಎಂದು ಕೂಲಂಕಷ ತನಿಖೆ ನಡೆಸಿ ಮತ್ತು ಸಾಲಗಾರರಿಗೆ ನಿರ್ಧಿಷ್ಟ ವಿಧದ ಆಕ್ಷೇಪ ಗಳನ್ನು ಸಲ್ಲಿಸಿ ಸಾಲಗಾರರ ಭಾಗದ ಆಲಿಕೆ ನಡೆಸಿ ಸಮರ್ಪಕವಾಗಿ ಯೆ ವಸೂಲಾತಿ ಮತ್ತು ಜಪ್ತಿ ಆದೇಶ ಜರುಗಿಸಬೇಕೆಂದು ಒತ್ತಾಯಿಸಿ ಇಂದು ಮಂಗಳೂರಿನಲ್ಲಿ ಪಿ.ಯು.ಸಿ.ಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ ಸ್) ಎನ್.ಜಿ. ಓ.ಸಂಸ್ಥೆಯು ಪ್ರತಿಭಟನೆ ನಡೆಸಿ ಒತ್ತಾಯಿಸಿತು.

ಪ್ರತಿಭಟನೆಯಲ್ಲಿ ಬ್ಯಾಂಕ್ ಅಕ್ರಮ ವಸೂಲಾತಿ ಸಂತ್ರಸ್ತೆ ನೋಯಲ್ ಮೈಕಲ್ ಸಲ್ದಾನ ಮತ್ತು ಜಾನ್ ಸಲ್ದಾನ ರವರು ಸೇರಿದಂತೆ ಎನ್.ಜಿ. ಓ ಸದಸ್ಯರು ಹಾಗೂ ಅಧ್ಯಕ್ಷರಾದ ಈಶ್ವರ್ ರಾಜ್,ಕಾರ್ಯದರ್ಶಿ ಅಜಯ್ ಡಿ ಡಿಸಿಲ್ವಾ, ಕೋಶಾಧಿಕಾರಿ ಹನೀಫ್ ಪಾಜೇಪಲ್ಲ , ಸದಸ್ಯರಾದ ಮೊಹಮ್ಮದ್ ಹನೀಫ್ ಯು ಬಶೀರ್ ಹೋಕ್ಕಾಡಿ, ಅಗಸ್ಟೀನ್ ರೊಡ್ರಿಗ್ ಸ್ ಮತ್ತಿತರರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English