ಮಂಜನಾಡಿಯಲ್ಲಿ ಸತ್ತ ಕಾಗೆಗಳಿಗೆ ಹಕ್ಕಿಜ್ವರವಿಲ್ಲ – ವರದಿ

12:38 AM, Monday, January 11th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

crowಮಂಗಳೂರು: ಮಂಜನಾಡಿ ಗ್ರಾಮದ ಆರಂಗಡಿ ಬಳಿ ಸತ್ತು ಬಿದ್ದಿದ್ದ ಕಾಗೆಯ ಮರಣೋತ್ತರ ವರದಿ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈ ಸೇರಿದ್ದು, ವರದಿಯಲ್ಲಿ ನೆಗೆಟಿವ್‌ ಕಾಣಿಸಿಕೊಂಡಿದೆ. ಇದರೊಂದಿಗೆ ಸಾರ್ವಜನಿಕರಲ್ಲಿದ್ದ ದೊಡ್ಡ ಆತಂಕ ಕೂಡ ಮರೆಯಾಗಿದೆ.

ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದ ಭೀತಿ ನಡುವೆ  ಮಂಜನಾಡಿಯಲ್ಲಿ ಸತ್ತು ಬಿದ್ದ ಕಾಗೆಗಳಿಂದ ಜನ ಆತಂಕ ಗೊಂಡಿದ್ದರು. ಅದರಂತೆ  ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಇದರಲ್ಲಿ ಒಂದು ಕಾಗೆ ಹೊರತುಪಡಿಸಿ ಉಳಿದ ಕಾಗೆಗಳ ಅಸ್ತಿಪಂಜರ ಪೂರ್ಣವಾಗಿ ಕೊಳೆತು ಹೋಗಿತ್ತು. ಕಾಗೆಯ ಶವದ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಅದರಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ದ.ಕ. ಜಿಲ್ಲಾಡಳಿತ ಮಾಹಿತಿ ನೀಡಿದೆ.

ಕೋಳಿ ಲೋಡ್‌ಗಳನ್ನು ಹೊತ್ತ ವಾಹನಗಳು ಕೇರಳ ಭಾಗದಿಂದ ಕರ್ನಾಟಕ ಗಡಿ ಪ್ರವೇಶಿಸದಂತೆ ಜಾಲ್ಸೂರು, ಸಾರಡ್ಕ, ತಲಪಾಡಿ ಮತ್ತು ತೌಡುಗೋಳಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಜಿಲ್ಲಾ ರೋಗ ನಿಯಂತ್ರಣ ಸಮಿತಿ ಸಭೆ ನಡೆಸಲಾಗಿದ್ದು, ರೋಗವನ್ನು ಪ್ರತಿಬಂಧಕ ಮಾಡುವ ಬಗ್ಗೆ ಸೂಕ್ತ ಆದೇಶ ನೀಡಲಾಗಿದೆ. ಸಾರ್ವಜನಿಕರಿಗೆ ರೋಗ ಲಕ್ಷಣ, ಕೋಳಿ ಸೇರಿದಂತೆ ಹಕ್ಕಿಗಳ ಸಾವು ಕಂಡುಬಂದರೆ ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆಗೆ ದೂರು ನೀಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English