ಮಂಗಳೂರು : ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಎನ್. ಶಶಿಕುಮಾರ್ ಮಲ್ಟಿ ಟ್ಯಾಲೆಂಟೆಡ್ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಸಂಚಲನ ಮೂಡಿಸುತ್ತಿದ್ದಾರೆ. ಪೊಲೀಸ್ ಕಮಿಷರ್ ಅವರು ನಗರದ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಡುವುದರ ಮೂಲಕ ತಾನೊಬ್ಬ ಉತ್ತಮ ಹಾಡುಗಾರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ
ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ರಾತ್ರಿ ಕಾರ್ಯನಿಮಿತ್ತ ಮೂಡುಬಿದಿರೆಗೆ ಹೋಗಿದ್ದ ಕಮಿಷನರ್ ತಡರಾತ್ರಿ ಮರಳಿ ಬರುವಾಗ ಕುಲಶೇಖರ ಬಳಿ ಹತ್ತು ಸಮಸ್ತರ ಪರವಾಗಿ ನಡೆಯುತ್ತಿದ್ದ ದೇವಿ ಮಹಾತ್ಮೆ ಯಕ್ಷಗಾನಕ್ಕೆ ತೆರಳಿ ಸಾರ್ವಜನಿಕರ ಮಧ್ಯೆ ಕುಳಿತು 2ಗಂಟೆಗಳ ಕಾಲ ಯಕ್ಷಗಾನ ವೀಕ್ಷಿಸಿದ್ದರು. ಮಾತ್ರವಲ್ಲದೆ ಮಹಿಷಾಸುರನ ಅಬ್ಬರವನ್ನು ವಿಡಿಯೋ, ಫೊಟೋ ಚಿತ್ರೀಕರಣ ಮಾಡಿದ್ದರು. ಸಂಘಟಕರ ಬಳಿ ತೆರಳಿ ಯಕ್ಷಗಾನ ಕಲೆ, ಪ್ರಸಂಗದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದರು. ಇದೀಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಗರದಲ್ಲಿ ಎರಡು ದಿನಗಳ ಕಾಲ ಬೀಚ್, ಮೈದಾನ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವವರು, ಅನಾಮಿಕರ ವಿರುದ್ಧ ಕಾರ್ಯಾಚರಣೆ ಮಾಡಿದ್ದರು. ಕಮಿಷನರ್ ಕಾರ್ಯಾಚರಣೆಗೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.
ಶನಿವಾರ ಉಳ್ಳಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.
Click this button or press Ctrl+G to toggle between Kannada and English