ಜನವರಿ 15ರಿಂದ ದೇಶಾದ್ಯಂತ ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ಆರಂಭ

2:10 PM, Thursday, January 14th, 2021
Share
1 Star2 Stars3 Stars4 Stars5 Stars
(No Ratings Yet)
Loading...

vhp ಮಂಗಳೂರು: ಅಯೋಧ್ಯೆಯಲ್ಲಿ ಅಂದಾಜು 1,100 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗಲಿರುವ  ಶ್ರೀ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ಜ.15ರಿಂದ ಆರಂಭಗೊಳ್ಳಲಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳ ಎಲ್ಲಾ ಮನೆಗಳನ್ನು ಸಂಪರ್ಕ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಲಾಗಿದೆ ಎಂದು ವಿಹಿಂಪ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದರು.

ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ಒಟ್ಟು 450-500 ಕೋಟಿ ರೂ. ಆಗಲಿದ್ದು, ಉಳಿದಂತೆ ವಸತಿ ಗೃಹ, ಅನ್ನಚತ್ರ, ಗ್ರಂಥಾಲಯ ಇತ್ಯಾದಿ ಒಳಗೊಂಡಂತೆ ಸುಮಾರು 600 ಕೋಟಿ ರೂ‌. ಖರ್ಚಾಗಲಿದೆ. ಒಟ್ಟಾರೆ 1,100 ಕೋಟಿಯಷ್ಟು ವ್ಯಯ ಆಗಲಿದೆ. ಆದರೆ ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕೆನ್ನುವ ಉದ್ದೇಶದಿಂದ ದೇಶದ ಎಲ್ಲ ಹಿಂದೂಗಳಿಂದ ದೇಣಿಗೆ ಪಡೆಯುವ ಸಂಕಲ್ಪ ಮಾಡಲಾಗಿದೆ ಎಂದರು.

ನಿಧಿಸಮರ್ಪಣಾ ಅಭಿಯಾನಕ್ಕೆ ದೇಣಿಗೆ ಪಡೆಯುವ ಉದ್ದೇಶದಿಂದ ನಗರದಲ್ಲಿ 4000 ಬೂತ್ಗಳನ್ನು ನಿರ್ಮಿಸಲಾಗಿದೆ. ಒಂದೊಂದು ಬೂತ್ ನಲ್ಲಿಯೂ 25 ಕಾರ್ಯಕರ್ತರ ತಂಡ‌ ಈಗಾಗಲೇ ರಚನೆಯಾಗಿದೆ. ಒಟ್ಟಾರೆಯಾಗಿ ಎಲ್ಲ ಹಿಂದೂಗಳ ಮನೆಗಳನ್ನು ಸಂಪರ್ಕ ಮಾಡಿ ದೇಣಿಗೆ ಸಂಗ್ರಹಿಸಬೇಕು. ಅಲ್ಲದೆ ಜಾತಿ, ಮತ, ಬೇಧವಿಲ್ಲದೆ ಯಾರು ದೇಣಿಗೆ ನೀಡುತ್ತಾರೋ, ಅವರಿಂದಲೂ ಹಣ ಪಡೆದುಕೊಳ್ಳಲಾಗುತ್ತದೆ‌ ಎಂದು ಹೇಳಿದರು.

10 ರೂ. ಕೂಪನ್, 100 ರೂ. ಕೂಪನ್, 1000 ರೂ. ಕೂಪನ್ ಈ ರೀತಿ ಮೂರು ರೀತಿಯ ಕೂಪನ್ ಗಳಿರುತ್ತವೆ‌. 2000 ಕ್ಕಿಂತ ಮೇಲ್ಪಟ್ಟ ದೇಣಿಗೆ ನೀಡಿದ ಭಕ್ತರಿಗೆ ರಸೀದಿ ನೀಡಲಾಗುತ್ತದೆ. ಈ ಭಕ್ತರಿಗೆ ಭಾರತದ ಆದಾಯ ತೆರಿಗೆ ಕಾಯ್ದೆ 80 ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಹಣ ಸಂಗ್ರಹ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದ್ದು, ಸಂಗ್ರಹವಾದ ಮೊತ್ತವನ್ನು 48 ಗಂಟೆಯೊಳಗೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಅಲ್ಲದೆ ಭಕ್ತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ತೀರ್ಥ ಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English