ಮಂಗಳೂರು : ಕಳೆದ 15 ದಿನಗಳಿಂದ ಉಳ್ಳಾಲ ಬಂಡಿಕೊಟ್ಯ, ಗೊಳಿಯಡಿ ಎಂಬಲ್ಲಿ ಪಾದಾಚಾರಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಆರೋಪಿಯ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದರು.
ಉಳ್ಳಾಲ ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ ಬಂಡಿಕೊಟ್ಯ, ಗೊಳಿಯಡಿ ರಸ್ತೆಯಾಗಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಓಣಿಯಲ್ಲಿ ಬೈಕ್ ನಲ್ಲಿ ಬರುವ ಆಗಂತುಕರು ಮಹಿಳೆಯರ ಮೈ ಸವರಿಕಂಡು ಹೋಗುತ್ತಿದ್ದು, ಕಳೆದ 15 ದಿನಗಳಿಂದ ಮೂರು- ನಾಲ್ಕು ಬಾರಿ ಇಂತಹ ಘಟನೆಗಳು ನಡೆದಿತ್ತು.
ಶುಕ್ರವಾರವೂ ಇಂತಹ ಘಟನೆ ನಡೆದಾಗ ಸ್ಥಳೀಯರು 16ರ ಹರೆಯದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಸೆರೆಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿದ್ದು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English