ಗೋ ಹತ್ಯೆ ಎಂದರೆ ಅದು ಮಾತೃ ಹತ್ಯೆಗೆ ಸಮಾನ : ಶ್ರೀ ನಿರ್ಮಲನಾಥಜೀ ಮಹಾರಾಜ್

11:26 PM, Friday, January 15th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

nirmalnathjiಮಂಗಳೂರು: ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದು ಸ್ವಾಗತಾರ್ಹ. ಗೋವು ಕೇವಲ ಪಶುವಲ್ಲ, ಇದರಲ್ಲಿ ದೇವಾನುದೇವತೆಗಳು ಐಕ್ಯವಾಗಿದ್ದಾರೆ. ಇಂತಹ ಗೋವಿನ ಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿ ರಾಜ್ಯ ಸರಕಾರ ಅತ್ಯುತ್ತಮ ಕಾರ್ಯ ಮಾಡಿದೆ ಎಂದು ಕದ್ರಿ ಜೋಗಿ ಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕದ್ರಿ ಜೋಗಿ ಮಠದಲ್ಲಿ ಮಾತನಾಡಿದ ಅವರು, ಗೋ ಹತ್ಯೆ ಎಂದರೆ ಅದು ಮಾತೃ ಹತ್ಯೆಗೆ ಸಮಾನ. ಆದ್ದರಿಂದ ತಾಯಿಯನ್ನು ಹೊಡೆದು ಕೊಂದ ಪಾಪ ಗೋ ಹತ್ಯೆ ಮಾಡಿದವನಿಗೂ ತಟ್ಟುತ್ತದೆ ಎಂದರು.

ಗೋವುಗಳ ರಕ್ಷಣೆ ಮಾಡುವವನು ಶ್ರೇಷ್ಠನಾಗುತ್ತಾನೆ. ಅದೇ ರೀತಿ ಗೋ ರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಆದ್ದರಿಂದ ರಾಜ್ಯ ಸರಕಾರದ ನಡೆ ಸ್ವಾಗತಾರ್ಹ. ಈ ಕಾನೂನು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ನಿರ್ಮಲನಾಥಜೀ ಹೇಳಿದರು.

ಗೋವು ಕೇವಲ ಪಶುವಲ್ಲ, ಇದರಲ್ಲಿ ಎಲ್ಲಾ ದೇವತೆಗಳ ಸಾನಿಧ್ಯವಿದೆ. ಗೋವಿನ ಮಹತ್ವ ಬಹಳ ಹಿರಿಯದು. ರಾಜ್ಯ ಸರ್ಕಾರ ಗೋಹತ್ಯೆಯನ್ನು ಸ್ಥಗಿತಗೊಳಿಸಿ ಬಹಳ ಉತ್ತಮ ಕಾರ್ಯ ಮಾಡಿದೆ ಎಂದು ಶ್ರೀ ನಿರ್ಮಲನಾಥಜೀ ಮಹಾರಾಜ್ ಹೇಳಿದರು.

ನಾಥ ಸಂಪ್ರದಾಯದಲ್ಲಿ ದೇಶಕ್ಕೆ ಹೆಸರಾಗಿರುವ ಕದ್ರಿಯಲ್ಲಿರುವ ಜೋಗಿ ಮಠದ ಶ್ರೀಕಾಲಭೈರವ ದೇವಸ್ಥಾನ ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಸ್ಥಾನ. ಸದ್ಯ ಕಾಲಭೈರವ ದೇವಸ್ಥಾನವನ್ನು ನವೀಕರಿಸಲು ನಿರ್ಧರಿಸಲಾಗಿದ್ದು, ಸುಮಾರು 10 ಕೋಟಿ ರೂ‌. ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಸ್ವಾಮೀಜಿ ಹೇಳಿದರು‌.

ಈಗಾಗಲೇ ಶ್ರೀಕಾಲಭೈರವ ದೇವಸ್ಥಾನದ ಸ್ಥಾವರಗಳ ನಿರ್ಮಾಣದ ರೂಪರೇಷೆಗಳನ್ನು ಸಿದ್ಧಪಡಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಆದ್ದರಿಂದ ದಾನಿಗಳ ನೆರವಿನೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು‌.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English