ಅಂತರ್ ರಾಜ್ಯ ಕಳ್ಳರ ಜಾಲ ಪತ್ತೆ, 13 ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ

1:05 PM, Saturday, December 15th, 2012
Share
1 Star2 Stars3 Stars4 Stars5 Stars
(No Ratings Yet)
Loading...

Inter state thievesಮಂಗಳೂರು :ಜುವೆಲ್ಲರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಚೋರರ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿ ಒಟ್ಟು 8 ಮಂದಿಯನ್ನು ಬಂಧಿಸಿ ಕಾರು ಸಹಿತ 13 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶ ಧಾರ್ ಜಿಲ್ಲೆಯ ಕುಕ್ಷಿ ತಾಲೂಕಿನ ಭಾಗ್ ತಾಂಡಾ ವಾಸಿಗಳಾದ ಅಮರ್ ಸಿಂಗ್ ಯಾನೆ ಅಮ್ಜತ್(28), ಸರ್ದಾರ್(20), ಮದನ್(32), ಬಹುಲಿಯ(50), ಮಡಿಯಾ ಭುರಿಯಾ(40), ಉಷನ್ ಬಿಲಾಲ(38), ಮೋಹನ್ ಸಿಂಗ್ ಯಾನೆ ಮುನ್ಸ(30), ವಿಜಯಾ ಕುಮಾರ್ ಸೋನಿ ಯಾನೆ ಮುನ್ನಾ ಜೋಭಟ್(50) ಬಂಧಿತ ಆರೋಪಿಗಳು. ಒಬ್ಬ ಆರೋಪಿ ಬನ್ ಸಿಂಗ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಬೆಳ್ತಂಗಡಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಎನ್‌.ಜಿ. ಭಾಸ್ಕರ ರೈ ಮತ್ತು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಜಯಾನಂದ ಕೆ. ತಮ್ಮ ಸಿಬ್ಬಂದಿ ಜತೆ ಡಿಸೆಂಬರ್ 1ರಂದು ಗಸ್ತು ತಿರುಗುತ್ತಿದ್ದ ಸಂದರ್ಭ ಸೊಣಂದೂರು ಗ್ರಾಮದ ಸಬರಬೈಲು ಎಂಬಲ್ಲಿ ಅಪರಿಚಿತ ಐವರು ಅನುಮಾನಾಸ್ಪದವಾಗಿ ಓಡಲೆತ್ನಿಸಿದರು. ಪೊಲೀಸರು ಸುತ್ತುವರಿದಾಗ ಒಬ್ಬಾತ ಓಡಿ ತಪ್ಪಿಸಿಕೊಂಡ ಹಾಗೂ ಉಳಿದ ನಾಲ್ವರು ಸೆರೆ ಸಿಕ್ಕಿದರು. ಈ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಆರೋಪಿಗಳ ಬಳಿ ಕಬ್ಬಿಣದ ರಾಡ್, ಮೆಣಸಿನಪುಡಿ ಪತ್ತೆಯಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ ರಸ್ತೆಯಲ್ಲಿ ಹೋಗುವವರನ್ನು ಅಡ್ಡ ಹಾಕಿ ಮೆಣಸಿನ ಪುಡಿ ಎರಚಿ ನಗದು ಮತ್ತು ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಅಲ್ಲದೆ ತಾವು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಕುಕ್ಷಿ ತಾಲೂಕಿನ ಭಾಗ್‌ ತಾಂಡಾ ನಿವಾಸಿಗಳೆಂದು ಮಾಹಿತಿ ನೀಡಿದರು.

ಈ ತಂಡ ಮಂಗಳೂರಿನ ಪೂಂಜಾಲಕಟ್ಟೆ ಬಳಿಯ ಸಾವಿತ್ರಿ ಜ್ಯುವೆಲ್ಲರ್ಸ್, ಬಾಳಿಗ ಜ್ಯುವೆಲ್ಲರ್ಸ್, ಕಿನ್ನಿಗೋಳಿಯ ಒಂದು ಚಿನ್ನದಂಗಡಿ ಹಾಗೂ ಪೆರ್ಡೂರು ಬಳಿಯ ಒಂದು ಚಿನ್ನದಂಗಡಿಯಲ್ಲಿ ಕಳವು ಮಾಡಿರುವ ಆರೋಪಿಗಳಾಗಿದ್ದಾರೆ. ಕಳವು ಗೈದ ಅಂಗಡಿಗಳಲ್ಲಿ ಇದ್ದ ಸಿಸಿಟಿವಿಯ ಆಧಾರದಲ್ಲಿ ಇದು ತಿಳಿದು ಬಂದಿದ್ದು ಆರೋಪಿಗಳು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಉಪವಿಭಾಗ ಎಎಸ್‌ಪಿ ಅನುಚೇತ್ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಎನ್.ಜಿ.ಭಾಸ್ಕರ ರೈ, ಪುಂಜಾಲಕಟ್ಟೆ ಠಾಣೆ ಪಿಎಸ್‌ಐ ಜಯಾನಂದ, ಬಂಟ್ವಾಳ ನಗರ ಠಾಣೆ ಪಿಎಸ್‌ಐ ನಾಗೇಶ್ ಕೆ. ಹಾಗೂ ಸಿಬ್ಬಂದಿಗಳು ಆರೋಪಿಗಳಾದ ಅಮರ್ ಸಿಂಗ್ ಮತ್ತು ಸರ್ದಾರ್ ಎಂಬವರನ್ನು ಕಸ್ಟಡಿಗೆ ತೆಗೆದುಕೊಂಡು ಮಧ್ಯ ಪ್ರದೇಶಕ್ಕೆ ತೆರಳಿ ಕಳವು ಮಾಡಿದ ಸೊತ್ತುಗಳನ್ನು ಪಡೆದುಕೊಂಡಿರುವ ವಿಜಯ ಕುಮಾರ್ ಎಂಬಾತನನ್ನು ಬಂಧಿಸಿ 10 ಕೆ.ಜಿ. ಬೆಳ್ಳಿಯ ಒಡವೆ ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ನಡೆದ ಪತ್ರಿಕಾ ಘೋಷ್ಟಿಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English