ಮಂಗಳೂರು : ಸೈಡ್ ಕೊಡುವ ವಿಚಾರವಾಗಿ ನಗರದ ಪಡೀಲ್ ಫೈಸಲ್ ನಗರ ಎಂಬಲ್ಲಿ ಬೈಕ್ ಸವಾರನೊಬ್ಬ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ಚಾಲಕ ಹಾಗೂ ಬೈಕ್ ಸವಾರನ ನಡುವೆ ಘರ್ಷಣೆ ನಡೆದಿದೆ. ವಾಹನಗಳಿಗೆ ಸೈಡ್ ಕೊಡುವ ವಿಚಾರವಾಗಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿಲ್ಲ ಎಂಬುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ
Click this button or press Ctrl+G to toggle between Kannada and English