ಸರಕಾರಿ ಸ್ಥಳದಿಂದ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ; ಗ್ರಾಪಂ ಸದಸ್ಯ ಸಹಿತ ಮೂವರ ಬಂಧನ

10:52 PM, Wednesday, January 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Wooden Logಸುಳ್ಯ : ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಇಟ್ಟಿರುವುದಲ್ಲದೆ, ಸೊತ್ತುಗಳನ್ನು ಸಾಗಾಟ ಮಾಡಿರುವ ಪ್ರಕರಣದಲ್ಲಿ  ಜಾಲ್ಸೂರು ಗ್ರಾಪಂ ಸದಸ್ಯ ಸಹಿತ ಮೂವರನ್ನು ಬಂಧಿಸಿರುವುದಾಗಿ ಪಂಜ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಾಲ್ಸೂರು ಗ್ರಾಪಂ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ ಹಾಗೂ ಮುಹಮ್ಮದ್ ಸುಹೈಬ್ ದೇಲಂಪಾಡಿ ಮತ್ತು ಅಭಿಲಾಷ್ ಗೌಡ ಅರಕಲಗೂಡು ಬಂಧಿತ ಆರೋಪಿಗಳು.

ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಶೇಖರಿಸಿಟ್ಟಿದ್ದ ಮರಗಳನ್ನು  ಪಂಜ ವಲಯಾರಣ್ಯಾಧಿಕಾರಿಗಳ ತಂಡ ಬೇಧಿಸಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದಲ್ಲಿ 26 ಕಿರಾಲ್‌ಬೋಗಿ ದಿಮ್ಮಿಗಳು, ಒಂದು ಜೆಸಿಬಿ ಯಂತ್ರ, ಒಂದು ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಸ್ಥಳದಿಂದ ಸಾಗಾಟವಾಗಿದ್ದ ಕಿರಾಲ್‌ಬೋಗಿಯ 27 ದಿಮ್ಮಿಗಳು, ಒಂದು ಲಾರಿಯನ್ನು ಕೇರಳ ಗಡಿ ಭಾಗದಲ್ಲಿ ವಶಪಡಿಸಲಾಗಿದೆ. ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲನ್ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English