ಬೆಂಗಳೂರು : ಇ ಜನ್ಮ ತಂತ್ರಾಂಶದಲ್ಲಿ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಲು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನಿಗಮ ಮಂಡಳಿ ಹಾಗೂ ಸ್ವಾಯುತ್ತ ಸಂಸ್ಥೆಗಳು ಸರ್ಕಾರದ ಸೇವೆ/ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ರಾಜ್ಯದ ನಿವಾಸಿ ನಾಗರಿಕರಿಂದ ಕುಟುಂಬ ಗುರುತಿನ ಸಂಖ್ಯೆ (ಪಡಿತರ ಚೀಟಿ ಸಂಖ್ಯೆ (ರೇಷನ್ಕಾರ್ಡ್) ನ್ನು ಕಡ್ಡಾಯವಾಗಿ ಪಡೆಯಲು ಸೂಚಿಸಲಾಗಿದೆ.
ರಾಜ್ಯಾದ್ಯಂತ ಜನನ ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಇ-ಜನ್ಮ ತಂತ್ರಾಂಶದಲ್ಲಿ ಪಡಿತರ ಚೀಟಿಯ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಬೇಕಾಗಿರುತ್ತದೆ. ಜನನ ಮರಣ ಮುಖ್ಯ ನೋಂದಣಾಧಿಕಾರಿಗಳಿಂದ ರಾಜ್ಯದ ಎಲ್ಲಾ ನೋಂದಣಾಧಿಕಾರಿಗಳಿಗೆ/ಉಪನೋಂದಣಾಧಿಕಾರಿಗಳಿಗೆ ಜನನ ಮರಣ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಲು ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಲು ತಿಳಿಸಲಾಗಿದೆ.
ರಾಜ್ಯದ ನಾಗರಿಕರಲ್ಲಿ ಪಡಿತರ ಚೀಟಿ ಲಭ್ಯವಿಲ್ಲದಿದ್ದಲ್ಲಿ www.ahara.kar.nic.in, www.sevasindu.karnataka.gov.in ವೆಬ್ಸೈಟ್ನಿಂದ ಸೃಜಿಸಿ ನಂತರ ಪಡಿತರ ಚೀಟಿ ಸಂಖ್ಯೆಯನ್ನು (Ration Card Number) ಜನನ ಮರಣ ನೋಂದಣಿಗೆ ಉಪಯೋಗಿಸಬಹುದೆಂದು ತಿಳಿಸಲಾಗಿದೆ.
ಇನ್ನು ಮುಂದೆ ರಾಜ್ಯದ ನಾಗರೀಕರು ಜನನ, ಮರಣ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಪಡಿತರ ಚೀಟಿ ಸಂಖ್ಯೆಯನ್ನು (Ration Card) ಒದಗಿಸಬೇಕೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English