ಹುಬ್ಬಳ್ಳಿ ಮೂರು ಸಾವಿರ ಮಠ ಸರ್ವನಾಶಕ್ಕೆ ಯತ್ನಿಸುತ್ತಿದ್ದಾರೆ, ದಾಖಲೆ ಇದೆ : ದಿಂಗಾಲೇಶ್ವರ ಶ್ರೀ ಆರೋಪ

4:29 PM, Thursday, January 28th, 2021
Share
1 Star2 Stars3 Stars4 Stars5 Stars
(7 rating, 2 votes)
Loading...

Dingaleshwara Swamyಹುಬ್ಬಳ್ಳಿ: ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ದವಾಗಿದೆ. ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು ತೊಂದರೆ ಆಗುವುದಿಲ್ಲ. ಮೂರು ಸಾವಿರ ಮಠಕ್ಕೆ ತೊಂದರೆ ಆಗಿದೆ. ಹೀಗಾಗಿ ನಾನು ಮಠದ ಉಳಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡ್ತಾ ಇದೇನಿ. ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ. ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ ಮೋಹನ್ ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೋತ್ತೆ ಇರಲಿಲ್ಲ.ನಾನು ಉತ್ತರಾಧಿಕಾರಿ ಆಗಲು ಅಡ್ಡಗಾಲು ಹಾಕಿದ್ದಾರೆ.

ಸಿ.ಎಮ್ ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ. ದಿಂಗಾಲೇಶ್ವರ ಶ್ರೀ ಹೋರಾಟ ವ್ಯರ್ಥ ಪ್ರಯತ್ನ ಎಂದು ಲಿಂಬಿಕಾಯಿ ಹೇಳಿದ್ದಾರೆ.

ಒಂದು ವೇಳೆ ಪ್ರಯತ್ನ ವ್ಯರ್ಥವಾದ್ರೆ 36 ವರ್ಷದಿಂದ ತೊಟ್ಟ ಕಾವಿ ಬಟ್ಟೆಯನ್ನ ಮಠದ ದ್ವಾರ ಬಾಗಿಲಿಗೆ ಹಾಕಿ ನಾನು ವಾಪಸ್ಸು ಹೋಗ್ತೆನಿ. ಮಠದ ಆಸ್ತಿಯನ್ಬ ಉಳಿಸಿಕೊಳ್ಳಲು ಆಗದಿದ್ದರೆ ತೊಟ್ಟ ಖಾವಿ ಕಳಚಿ ಹಾಕುತ್ತೆನೆಂದು ಸವಾಲ್ ಲಿಂಬಿಕಾಯಿಗೆ ಸವಾಲು ಹಾಕಿದರು.

ಮಠದದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲಿಗಳಿವೆ. ಅವ್ಯವಹಾರ ಆಗಿಲ್ಲಾ ಎನ್ನುವದಾದರೆ ಮಠದ ಕತೃ ಗದ್ದುಗೆಗೆ ಬರಲಿ, ನಾನು ಬರ್ತೆನಿ. ಮಠದಲ್ಲಿಯೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ.ನನ್ನ ಹೋರಾಟಕ್ಕೆ ಮೂನ್ನೂರು ಸ್ವಾಮಿಜಿಗಳು ಬೆಂಬಲ ಕೊಟ್ಟಿದ್ದಾರೆ. ಇಂದು ಕೇವಲ ಎಂಟು ಸ್ವಾಮೀಜಿಗಳು ಬಂದಿದ್ದಾರೆ.

ಮೋಹನ ಲಿಂಬಿಕಾಯಿ ತನ್ನ ಮಠ ಉದ್ದಾರ ಮಾಡಿಕೊಳ್ಳಲು ಎಂಬ ಮಾತಿಗೆ ಪ್ರತಿಕ್ರಿಯೇ ನೀಡಿದ ಅವರು ಬಾಲೇಹೊಸರಿನ ಮಠ ಅಭಿವೃದ್ಧಿಗೆ ಮಾಡಿದ್ದೇನೆ. ಬೇಕಾದ್ರೆ ಮೋಹನ ಲಿಂಬಿಕಾಯಿಯನ್ನ ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ಬೆಳೆದಿದೆ. ಮೋಹನ್ ಲಿಂಬಿಕಾಯಿ ನನ್ನ ಮಠದ ಕಾರಕೂನ ಆಗಲಿ ಅವರಿಗೆ ಮಠವನ್ನ ನೋಡಿಕೊಳ್ಳಲು ಬಿಡ್ತೆನಿ ಎಂದರು.

ಮೋಹನ್ ಲಿಂಬಿಕಾಯಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು, ಮೋಹನ ಲಿಂಬಿಕಾಯಿ ದಿಂಗಾಲೇಶ್ವರ ಶ್ರೀಗಳು ಮೂರು ಸಾವಿರ ಮಠಕ್ಕೆ ಏನೂ ಸಂಬಂಧ ಎಂದು ಹೇಳಿದ್ದಾರೆ. ಇದೇ ಮೋಹನ್ ಲಿಂಬಿಕಾಯಿ ಒಂದು ಕಾಗದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಸಂಬಂಧ ಏನೂ ಎಂಬುದು ಹೇಳುತ್ತದೆ. ನನಗೂ ಮೂರು ಸಾವಿರ ಮಠಕ್ಕೆ ಏನೂ ಸಂಬಂಧ ಎಂಬುದಕ್ಕೆ ಈ ದಾಖಲೆಗಳನ್ನ ಬಿಡುಗಡೆ ಮಾಡ್ತಾ ಇದೇನಿ. ಈ ಕುರಿತು ದಾಖಲೆಗಳನ್ನ ಬಿಡುಗಡೆ ಮಾಡಿದ ದಿಂಗಾಲೇಶ್ವರ ಶ್ರೀ. ಮೂರು ಸಾವಿರ ಮಠದ ಇತಿಹಾಸವನ್ನ ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ನನ್ನ ಬಗ್ಗೆ ತಿಳಿಯುತ್ತದೆ. ಆದ್ರೆ ಮೂರು ಸಾವಿರ ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದವರಿಗೆ ನಾನು ಯಾರು ಎಂಬುದು ತಿಳಿಯುವುದಿಲ್ಲ. ನನ್ನ ಮಠಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಅವರು ಸಹ ಸಮಿತಿಯಲ್ಲಿದ್ದವರು. ಮೂರು ಸಾವಿರ ಮಠದ ಆಸ್ತಿಯನ್ನ ಕಾನೂನು ಬಾಹಿರವಾಗಿ ಆಸ್ತಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳ್ತಾರೆ. ಆಸ್ತಿಯನ್ನ ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನ ನಿಮಗೆ ಯಾರು ಕೊಟ್ಟರು. ಈ ಮಠದ ಸ್ಥಿರಾಸ್ತಿ ಆಸ್ತಿಗಳನ್ನ ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಇದಕ್ಕೆ ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರ ಸ್ವಾಮಿ ಮಠದವನ್ನ ನಾಶ ಮಾಡಿದ್ದು ಸಿಎಂ ಉದಾಸಿ, ಸಿಎಂ ಉದಾಸಿ ಹಾನಗಲ್ ಮಠವನ್ನ ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

ಮೂರು ಸಾವಿರ ಮಠದಲ್ಲಿಯೇ ದಾಖಲಗಳನ್ನ ಬಿಡುಗಡೆ ಮಾಡ್ತೆನಿ. ಸದ್ಯದಲ್ಲೇ ಎಲ್ಲಾ ದಾಖಲೆಗಳನ್ನು ಮಠಕ್ಕೆ ತೆಗೆದುಕೊಂಡು ಬಂದೆ ಬರ್ತೆನಿ. ಶಂಕರನ್ನ ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳ್ತಾರೆ. ಆದ್ರೆ ನಾನು 2 ಕೋಟಿ ರೂಪಾಯಿ ಭಿಕ್ಷೆ ಬೆಡಿ ನಿಮಗೆ ಕೊಡ್ತೆನಿ, ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟ ಕೊಡಿ. 2.86 ಕೋಟಿ ರೂಪಾಯಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದಾರೆ.

ದಾನಪತ್ರ ನೋಂದ ಮಾಡಲು ಇಷ್ಟು ಹಣವನ್ನ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ…? ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನ ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ. ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ. ಬಸವರಾಜ ಹೊರಟ್ಟಿಯವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು ಮುಂದಾಗಬೇಕು ಎಂದರು.

ವರದಿ: ಶಂಭು, ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English