ಪ್ಯಾಂಟ್‌ ಜಿಪ್ ಜಾರಿಸಿದರೆ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

10:27 PM, Thursday, January 28th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

posco actಮುಂಬೈ: ಐದು ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ತೀರ್ಪು ನೀಡಿದ್ದು,  ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿಗಷ್ಟೇ ಚರ್ಮಕ್ಕೆ ಚರ್ಮ ತಾಗದಿದ್ದರೆ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನಾಗ್ಪುರ್ ಪೀಠ, ಈಗ ಮತ್ತೊಂದು ವಿವಾದಾತ್ಮಕ ತೀರ್ಪು ನೀಡಿ ಚರ್ಚೆಗೆ ಗ್ರಾಸವಾಗಿದೆ.

ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ತೀರ್ಪು ನೀಡಿದೆ.

ಆರೋಪಿ ಆಪ್ರಾಪ್ತೆಯ ಪ್ಯಾಂಟ್‌ ಜಿಪ್‌ ತೆಗೆದು, ಕೈ ಹಿಡಿದುಕೊಂಡಿದ್ದ ಎಂದು ಆಕೆಯ ತಾಯಿ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯ ಆರೋಪಿಗೆ ಐದು ವರ್ಷಗಳ ಕಠಿಣ ಸಜೆ ಹಾಗೂ 25,000 ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್, ಲೈಂಗಿಕ ದೌರ್ಜನ್ಯದಡಿ ದೈಹಿಕ ಸಂಪರ್ಕವಾಗಬೇಕಾದರೇ, ನೇರವಾಗಿ ದೈಹಿಕ ಸಂಪರ್ಕ ಉಂಟಾಗಬೇಕು ಅಥವಾ ಲೈಂಗಿಕ ಸಂಪರ್ಕ ಇಲ್ಲದೇ ಚರ್ಮಕ್ಕೆ ಚರ್ಮ ತಟ್ಟಬೇಕು ಎಂದು ಕೋರ್ಟ್‌ ತೀರ್ಪಿತ್ತಿದೆ. ಅಲ್ಲದೇ ಆರೋಪಿಗೆ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English