ಸವಾರನೇ ಇಲ್ಲದೇ ಮಧ್ಯರಾತ್ರಿ ಸುತ್ತು ಹಾಕಿದ ಬೈಕ್, ಭೂತ, ಪಿಶಾಚಿಯ ಕಾಟ ಎಂದು ವೈರಲ್

11:55 PM, Thursday, January 28th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Bike Moveಬಂಟ್ವಾಳ: ಮಧ್ಯರಾತ್ರಿ 1 ಗಂಟೆ ವೇಳೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಬೈಕ್ವೊಂದು ಸವಾರನೇ ಇಲ್ಲದೇ ಮಧ್ಯರಾತ್ರಿ ತನ್ನಷ್ಟಕ್ಕೆ ತಾನೇ ಚಲಿಸುತ್ತದೆ. ಬಂಟ್ವಾಳ ಸಮೀಪ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದು ಅದೇ ಪ್ರದೇಶದ್ದೇ ಬೈಕಾ ಎಂಬುದು ಇನ್ನೂ ಖಚಿತವಾಗಿಲ್ಲ.

ಕಳೆದ ವರ್ಷ ಡಿಸೆಂಬರ್ 30ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿವರಗಳಿವೆ.

ಊರಿನ ಹೆಸರು ಬದಲಾಯಿಸಿಕೊಂಡು ಈ ವಿಡಿಯೋ ಹರಿದಾಡುತ್ತಿದ್ದರೂ, ಇದರಲ್ಲಿ ಕಂಡುಬರುವ ದೃಶ್ಯ ಆಶ್ಚರ್ಯ ಹುಟ್ಟಿಸುತ್ತದೆ. ಈ ವಿಡಿಯೋ ಈಗ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಭೂತ, ಪಿಶಾಚಿಯ ಕಾಟ ಇರಬಹುದು ಎಂಬ ಗುಮಾನಿಯೊಂದಿಗೆ ಫಾರ್ವರ್ಡ್ ಆಗುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English