ಪೊಲೀಸ್ ಮೇಲೆ ದಾಳಿ ಮಾಡಲು : ಮಾಯಾ ಗ್ಯಾಂಗ್ ಮತ್ತು ಕಾರ್ಖಾನಾ ಗ್ಯಾಂಗ್

12:53 AM, Saturday, January 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

N shashikumarಮಂಗಳೂರು : ಮಂಗಳೂರು ಪೊಲೀಸ್ ಗೋಲಿಬಾರ್ ಸೇಡು ತೀರಿಸಲು ಕರ್ತವ್ಯನಿರತ ಪೊಲೀಸ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಆರೋಪದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ‘ಮಾಯಾ ಗ್ಯಾಂಗ್’ನ ಸದಸ್ಯರೊಂದಿಗೆ ‘ಕಾರ್ಖಾನಾ ಗ್ಯಾಂಗ್’ ಹೆಸರಿನ ಇನ್ನೊಂದು ತಂಡ ಕೈಜೋಡಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ವಶವಾಗಿರುವ ಇಬ್ರಾಹೀಂ, ಅಕ್ಬರ್ ಮತ್ತು ಮುಹಮ್ಮದ್ ಹನೀಫ್ ಎಂಬವರು ‘ಕಾರ್ಖಾನಾ ಗ್ಯಾಂಗ್’ನ ಸದಸ್ಯರು. ಇದರಲ್ಲಿ ಓರ್ವ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಉಳಿದವರ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ನವಾಝ್ ಮತ್ತು ಮುಹಮ್ಮದ್ ಖಾಯಿಸ್ ಎಂಬವರು ‘ಮಾಯಾ ಗ್ಯಾಂಗ್’ ಮತ್ತು ‘ಕಾರ್ಖಾನಾ ಗ್ಯಾಂಗ್’ಗಳ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಇಬ್ಬರನ್ನು, ಬಳಿಕ ಆರು ಮಂದಿಯನ್ನು ಹಾಗೂ ಇದೀಗ ಮೂವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English