ಮಂಗಳೂರು : ನೀ ತಾಂಟ್ರೆ ಬಾ ತಾಂಟ್ ಎಂಬ ಫೇಸ್ ಬುಕ್ ಪೇಜ್ ತೆರೆಯಲಾಗಿದ್ದು ಇದು ಎರಡು ಕೋಮುಗಳ ನಡುವೆ ಘರ್ಷಣೆ ಸೃಷ್ಟಿಸಲು ಮಾಡಲಾಗಿದೆ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ನಗರ ಪೊಲೀಸ್ ಆಯುಕ್ತ (ಡಿಸಿಪಿ) ಹರಿರಾಮ್ ಶಂಕರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿ ಅವರು, ಈ ಫೇಸ್ ಬುಕ್ ಪೇಜ್ನಲ್ಲಿ ನಕಲಿ ದಾಖಲೆಗಳ ಸಹಾಯದಿಂದ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತಿದ್ದು, ಇದು ವಿಭಿನ್ನ ಗುಂಪುಗಳ ನಡುವೆ ಘರ್ಷಣೆಯಾಗುವುದಕ್ಕಾಗಿ ಮಾಡಲಾಗುತ್ತಿದೆ” ಎಂದರು.
ಈ ನಿಟ್ಟಿನಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಕಲಿ ಪೇಜ್ ರಚಿಸುವ ಮತ್ತು ನಿರ್ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸಲು ಪ್ರಯತ್ನಿಸುವ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Click this button or press Ctrl+G to toggle between Kannada and English