ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ತದಡಿ ಮೀನುಗಾರಿಕೆ ಬಂದರಿನಲ್ಲಿ ಪರ್ಸೀನ್ ಬೋಟುಗಳು ಹಿಡಿದು ತಂದ ಮೀನನ್ನು ನಿಗಮದ ಮುಖಾಂತರ ಮಾರಾಟ ಮಾಡಿ ಮೀನುಗಾರರಿಗೆ ಉತ್ತಮ ಬೆಲೆಯನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಎಸ್. ಅಂಗಾರ ತಿಳಿಸಿದರು.
ಸೋಮವಾರ ನಡೆದ ವಿಧಾನಸಭೆಯ ಕಾರ್ಯಕಲಾಪದಲ್ಲಿ ಶಾಸಕ ಉಮಾನಾಥ್ ಎ ಕೋಟ್ಯಾನ್ (ಮೂಡಬಿದ್ರೆ) ಅವರು ಕೇಳಿದ ಮೀನುಗಾರಿಕಾ ವಲಯವನ್ನು ಅಭಿವೃದ್ಧಿಗೊಳಿಸುವ ಹಾಗೂ ಮತ್ಸ್ಯಾಹಾರವನ್ನು ಜನಪ್ರಿಯಗೊಳಿಸಲು ಮೀನುಗಾರಿಕೆ ಅಭಿವೃದ್ಧಿ ನಿಗಮವು ಹಮ್ಮಿಕೊಂಡಿರುವ ಕ್ರಿಯಾ ಯೋಜನೆಗಳ ಕುರಿತ ಪ್ರಶ್ನೆಗೆ ಸಚಿವರು ರಾಜ್ಯದ ಮೀನುಗಾರಿಕೆ ಬಂದರುಗಳಲ್ಲಿ ಒಟ್ಟು ದಿನವೊಂದಕ್ಕೆ 220 ಟನ್ ಸಾಮಥ್ರ್ಯದ ಮಂಜುಗಡ್ಡೆ ಸ್ಥಾವರಗಳನ್ನು ನಿರ್ಮಿಸಿ ಮೀನುಗಾರಿಕೆಗೆ ಮಂಜುಗಡ್ಡೆಯನ್ನು ಸರಬರಾಜು ಮಾಡಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 21 ಹವಾನಿಯಂತ್ತಿತ ಮೀನು ಮಾರಾಟ ಮಳಿಗೆ ಮತ್ಸ್ಯದರ್ಶಿನಿ ಉಪಾಹಾರ ಗೃಹಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ ಎಂದು ಉತ್ತರಿಸಿದರು.
ರಾಜ್ಯದ ಒಳನಾಡು ಪ್ರದೇಶಕ್ಕೆ ತಾಜಾ ಹಾಗೂ ಶೀಥಲೀಕೃತ ಮೀನು ಸರಬರಾಜು ಮಾಡಲು ಶೀಥಲ ಸರಪಣಿಯನ್ನು ಸ್ಥಾಪಿಸಿದೆ. ಮೀನುಗಾರಿಕೆ ಇಲಾಖೆಯ ಮತ್ಸ್ಯ ಜೋಪಾಸನೆ ಯೋಜನೆಯಡಿ ರಾಜ್ಯದ 20 ಮೀನು ಮಾರುಕಟ್ಟೆ ಸ್ಥಳಗಳಲ್ಲಿ 2 ಟನ್ ಸಾಮಥ್ರ್ಯದ ಶೀಥಲೀಕರಣದ ಘಟಕ ನಿರ್ಮಾಣವನ್ನು ನಿಗಮದಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ಮೀನು ರಫ್ತು ಮಾಡುವ ಪರವಾನಿಗೆ ಹೊಂದಿರುವ ಆಧುನಿಕ ಮೀನು ಸಂಸ್ಕರಣಾ ಸ್ಥಾವರವನ್ನು ನಿರ್ಮಿಸಲಾಗಿದೆ ಎಂದರು.
Click this button or press Ctrl+G to toggle between Kannada and English