ಮೂಡುಬಿದಿರೆ : ಜಗದೀಶ್ ಅಧಿಕಾರಿ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಇತಿಹಾಸವನ್ನು ತಿರುಚಿ ಮಾತನಾಡಿದ್ದಾರೆ ಹಾಗೂ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಬಿಲ್ಲವ ಸಮಾಜದವರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ನಾನು ಬಿಲ್ಲವ ಸಮಾಜಕ್ಕೆ ಯಾವುದೇ ರೀತಿಯ ಅಗೌರವ ತೋರಿಲ್ಲ. ಆದರೂ ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ, ನಾನು ಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ದೊಡ್ಡ ಅಭಿಮಾನಿ ಎಂದು ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಹೇಳಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ”ಧರ್ಮ ಆಡಳಿತ ಸಭೆಯಲ್ಲಿ ಯಾವುದೇ ನಿರ್ದಿಷ್ಟ ಧರ್ಮದವರನ್ನು ಕೀಳರಿಮೆಯಿಂದ ಕಾಣುವುದಿಲ್ಲ. ಧರ್ಮ ಜಾತಿ ಪಂಗಡ ಭಾಷೆ ಸಂಸ್ಕೃತಿಯ ವಿಚಾರದಲ್ಲಿ ಭೇದಭಾವ ಮಾಡಿದವನಲ್ಲ. ಗೌರವ ನೀಡುವ ಪರಂಪರೆ ಹೇಗೆ ಮುಂದುವರೆಯುತ್ತದೆ ಎಂಬ ವಿಚಾರವನ್ನು ಧರ್ಮಸಭೆಯಲ್ಲಿ ಹೇಳಿಕೆ ನೀಡಿದ್ದೇನೆ. ನಾನು ಬಿಜೆಪಿಯಲ್ಲಿದ್ದರೂ ಜನಾರ್ದನ ಪೂಜಾರಿಯವರ ದೊಡ್ಡ ಅಭಿಮಾನಿಯಾಗಿದ್ದು, ಬಿಲ್ಲವ ಸಮಾಜದ ಬಾಂಧವರಿಗೆ ಹಲವಾರು ರೀತಿಯ ಸಹಕಾರ ನೀಡುತ್ತ ಬಂದಿದ್ದೇನೆ ಎಂದು ತಿಳಿಸಿದರು.
ಈ ವಿಷಯದಿಂದ ನನ್ನ ಮನಸ್ಸಿಗೆ ಅಗಾದ ನೋವುಂಟು ಮಾಡಿದ್ದು, ಯಾರಿಗೂ ಬೇಸರವಾಗಿ ನನಗೆ ಜೀವನ ರಾಜಕೀಯ ಜೀವನ ಬೇಡ ಎಂದಿರುವ ಜಗದೀಶ್ ಅಧಿಕಾರಿ, ನಾನು ಸಲ್ಲೇಖನ ವ್ರತವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದೇನೆ. ದೇಹ ತ್ಯಾಗ ಮಾಡಲು ಸಿದ್ಧನಾಗಿರುವ ನಾನು ಮಾಡಿದ ತಪ್ಪಿಗೆ ಕ್ಷಮೆ ಎನ್ನುವುದು ಇಲ್ಲವೇ? ಬಿಲ್ಲವ ಸಮಾಜ ಎಂಬುವುದು ನನ್ನ ಹೃದಯ ಭಾಗ ಅವರೊಂದಿಗೆ ಬೆಳೆದವ ಎಂದು ಹೇಳಿದ್ದಾರೆ.
ಈ ಪ್ರಕರಣದ ವಿರುದ್ಧ ಮೂಡುಬಿದಿರೆ ಬಿಲ್ಲವ ಸಂಘವು ಜಗದೀಶ್ ಅಧಿಕಾರಿ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
Click this button or press Ctrl+G to toggle between Kannada and English